varthabharthi


ಕರ್ನಾಟಕ

ದಾವಣಗೆರೆ: ಆಕ್ಸಿಜನ್ ಬೆಡ್ ಸಿಗದೆ ಗ್ರಾಮೀಣ ಬ್ಯಾಂಕ್‍ ವ್ಯವಸ್ಥಾಪಕ ಸಾವು

ವಾರ್ತಾ ಭಾರತಿ : 6 May, 2021

ದಾವಣಗೆರೆ, ಮೇ 6: ಆಕ್ಸಿಜನ್ ಬೆಡ್ ಇಲ್ಲದೇ ನಗರದ ಪ್ರಗತಿ ಗ್ರಾಮೀಣ ಬ್ಯಾಂಕ್‍ನ ವ್ಯವಸ್ಥಾಪಕ ತುಕಾರಾಂ ನಾಯ್ಕ (58) ಮೃತಪಟ್ಟ ಘಟನೆ ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ಗುರುವಾರ ಸಂಭವಿಸಿದೆ.

ನಗರದ ಪ್ರಗತಿ ಗ್ರಾಮೀಣ ಬ್ಯಾಂಕ್‍ನ ವ್ಯವಸ್ಥಾಪಕ ತುಕಾರಾಂ ನಾಯ್ಕ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ಕುಟುಂಬ ವರ್ಗವು ಖಾಸಗಿ ಆಸ್ಪತ್ರೆಗಳನ್ನೆಲ್ಲಾ ಸುತ್ತಾಡಿ ಬೆಡ್ ಇಲ್ಲವೆಂಬ ಕಾರಣಕ್ಕೆ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿ ಆಕ್ಸಿಜನ್ ಬೆಡ್ ಸಿಗದೇ ಸಾವನ್ನಪ್ಪಿದ್ದಾರೆ ಎಮದು ತಿಳಿದುಬಂದಿದೆ.

ಆಸ್ಪತ್ರೆ ಮುಂದೆ ತುಕಾರಾಂ ನಾಯ್ಕ ಕುಟುಂಬ ವರ್ಗದವರ ರೋಧನೆ ಮುಗಿಲು ಮುಟ್ಟಿತ್ತು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)