varthabharthi


ಬೆಂಗಳೂರು

ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಅನಿವಾರ್ಯ: ಆರೋಗ್ಯ ಸಚಿವ ಡಾ.ಸುಧಾಕರ್

ವಾರ್ತಾ ಭಾರತಿ : 7 May, 2021

ಬೆಂಗಳೂರು, ಮೇ 7: ರಾಜ್ಯದಲ್ಲಿ ಕೋವಿಡ್ -19 ಅನ್ನು ನಿಯಂತ್ರಸಲು,  ಇನ್ನಷ್ಟು ಸಾವು-ನೋವಿನ ಪ್ರಮಾಣವನ್ನು ಕಡಿಮೆ ಮಾಡಲು ಲಾಕ್ಡೌನ್ ಅನಿವಾರ್ಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮಾಡಲು ಸ್ಥಳೀಯವಾಗಿಯೂ, ಜನಪ್ರತಿನಿಧಿಗಳಿಂದಲೂ ಒತ್ತಡ ಬರುತ್ತಿದೆ. ಆರೋಗ್ಯ ಇಲಾಖೆಯೂ ಇದೇ ಅಭಿಪ್ರಾಯವನ್ನು ಹೊಂದಿದೆ. ನಾನಂತೂ ಆರಂಭದಿಂದೂ ಇದೇ ನಿಲುವನ್ನು ಹೊಂದಿದ್ದೇನೆ. ಇದೇ ಪ್ರಸ್ತಾಪವನ್ನು ನಾನಿಂದು ಮುಖ್ಯಮಂತ್ರಿ ಜೊತೆ ಬಲವಾಗಿ ಮುಂದಿಡಲಿದ್ದೇನೆ. ಆದರೆ ಈ ಕುರಿತು ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ  ತೆಗೆದುಕೊಳ್ಳಲಿದ್ದಾರೆ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)