varthabharthi


ಕರಾವಳಿ

ಹಿರಿಯ ನ್ಯಾಯವಾದಿ ಇಲ್ಯಾಸ್ ಅಹ್ಮದ್ ಬಾವ ನಿಧನ

ವಾರ್ತಾ ಭಾರತಿ : 7 May, 2021

ಉಳ್ಳಾಲ, ಮೇ 7: ಹಿರಿಯ ನ್ಯಾಯವಾದಿ ಕೆ.ಎಂ.ಇಲ್ಯಾಸ್ ಅಹ್ಮದ್ ಬಾವ (82) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ಮುಂಜಾನೆ ನಿಧನರಾದರು.

ಉಳ್ಳಾಲದ ಪ್ರತಿಷ್ಠಿತ 'ಬಡ್ವಾಕ' ಮನೆತನದ ಹಿರಿಯ ಸದಸ್ಯರಾಗಿದ್ದ  ಇವರು ಹಲವು ವರ್ಷಗಳ ತನಕ ಗಲ್ಫ್ ರಾಷ್ಟ್ರದಲ್ಲಿ ಉನ್ನತ ಹುದ್ದೆಯಲ್ಲಿ ಸೇವಾ ನಿರತರಾಗಿದ್ದರು. ಸದ್ಯ ಮಂಗಳೂರಿನಲ್ಲಿ ವಕೀಲ ವೃತ್ತಿಯನ್ನು ಮಾಡುತ್ತಿದ್ದರು.

ಮೃತರು ಪತ್ನಿ, ಐವರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)