ಚಿಕ್ಕಬಳ್ಳಾಪುರ: ಕೋವಿಡ್ ಆಸ್ಪತ್ರೆಯಿಂದ ಆಕ್ಸಿಜನ್ ಸಿಲಿಂಡರ್ ಕಳವು
ಚಿಕ್ಕಬಳ್ಳಾಪುರ: ನಗರದ ಕೋವಿಡ್ ಆಸ್ಪತ್ರೆಯಲ್ಲಿ ಹತ್ತು ಆಕ್ಸಿಜನ್ ಸಿಲಿಂಡರ್ಗಳು ಕಳುವಾಗಿರುವ ಪ್ರಕರಣ ನಡೆದಿದೆ. ನಗರದ ಹಳೆ ಸರ್ಕಾರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿ ಕಳೆದ ಸಾಲಿನಿಂದ ಕೋವಿಡ್ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಇದಕ್ಕಾಗಿ ರೋಗಿಗಳಿಗಾಗಿ ಆಕ್ಸಿಜನ್ ಸಿಲಿಂಡರ್ಗಳನ್ನು ದಾಸ್ತಾನು ಮಾಡಲಾಗಿತ್ತು. ಆದರೆ ಇಂದು ದುಷ್ಕರ್ಮಿಗಳು ಹತ್ತು ಸಿಲಿಂಡರ್ ಗಳನ್ನು ಕಳವು ಮಾಡಿದ್ದಾರೆ.
ಈ ಸಂಬಂಧ ಡಾ.ವಿಜಯರವರು ನಿನ್ನೆ ಕರ್ತವ್ಯದ್ದ ಸಿಬ್ಬಂದಿ ಪಟ್ಟಿಯೊಂದಿಗೆ ಪೊಲೀಸರಿಗೆ ದೂರನ್ನು ಸಲ್ಲಿಸಿದ್ದು, ನಗರ ಠಾಣಾ ಪೊಲೀಸರು ಸಿಲಿಂಡರ್ಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ
Next Story