varthabharthi


ಕ್ರೀಡೆ

ಸುರಕ್ಷಿತವಾಗಿ ತಲುಪಿದ ಮುಂಬೆ ಇಂಡಿಯನ್ಸ್ನ ವಿದೇಶಿ ಆಟಗಾರರು

ವಾರ್ತಾ ಭಾರತಿ : 10 May, 2021

ಹೊಸದಿಲ್ಲಿ: ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಐಪಿಎಲ್ 2021ರ ಟೂರ್ನಿಯನ್ನು ಅನಿರ್ದಿಷ್ಟವಾಗಿ ಅಮಾನತುಗೊಳಿಸಿದ ನಂತರ ತಮ್ಮ ಎಲ್ಲಾ ವಿದೇಶಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸುರಕ್ಷಿತವಾಗಿ ತಮ್ಮ ಗಮ್ಯಸ್ಥಾನಗಳನ್ನು ತಲುಪಿದ್ದಾರೆ ಎಂದು ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ (ಎಂಐ) ರವಿವಾರ ತಿಳಿಸಿದೆ.

 ಕೋವಿಡ್-ಪಾಸಿಟಿವ್ ಪ್ರಕರಣಗಳು ಬಯೋ ಬಬಲ್‌ನಲ್ಲಿ ವರದಿಯಾದ ನಂತರ ಕಳೆದ ವಾರ ಲಾಭದಾಯಕ ಲೀಗ್‌ನ್ನು ಅರ್ಧದಲ್ಲೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಮುಂಬೈ ಇಂಡಿಯನ್ಸ್‌ನ ಒಟ್ಟು 14 ವಿದೇಶಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಭಾರತವನ್ನು ತೊರೆದಿದ್ದಾರೆ.

  ಮುಂಬೈ ಇಂಡಿಯನ್ಸ್ ನ ಕೀರನ್ ಪೊಲಾರ್ಡ್ ಸುರಕ್ಷಿತವಾಗಿ ಟ್ರಿನಿಡಾಡ್ ತಲುಪಿದರು. ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಮತ್ತು ಮಾರ್ಕೊ ಜಾನ್ಸೆನ್ ಜೋಹಾನ್ಸ್ ಬರ್ಗ್‌ಗೆ ಬಂದಿಳಿದಿದರು. ಎಂಐ ತಂಡದಲ್ಲಿರುವ ಆಸ್ಟ್ರೇಲಿಯದ ಆಟಗಾರರಾದ ಕ್ರಿಸ್ ಲಿನ್, ನಾಥನ್ ಕೌಲ್ಟರ್-ನೈಲ್ ಮತ್ತು ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಸೇರಿದಂತೆ ಸಹಾಯಕ ಸಿಬ್ಬಂದಿ ವಿಶೇಷ ವಿಮಾನ ಮೂಲಕ ಮಾಲ್ಡೀವ್ಸ್ ತಲುಪಿದ್ದಾರೆ. ಅಲ್ಲಿ ಅವರು 14 ದಿನಗಳ ಸಂಪರ್ಕತಡೆಯನ್ನು ಪೂರೈಸಲಿದ್ದಾರೆ.

 ಆ್ಯಡಮ್ ಮಿಲ್ನೆ, ಜಿಮ್ಮಿ ನೀಶಮ್, ಟ್ರೆಂಟ್ ಬೌಲ್ಟ್ ಮತ್ತು ಬೆಂಬಲ ಸಿಬ್ಬಂದಿ ಸೇರಿದಂತೆ ಎಂಐನ ನ್ಯೂಝಿಲ್ಯಾಂಡ್ ಆಟಗಾರರು ಫ್ರಾಂಚೈಸಿ ಮಾಡಿಕೊಟ್ಟಿರುವ ಚಾರ್ಟರ್ ಫ್ಲೈಟ್ ಮೂಲಕ ಆಕ್ಲೆಂಡ್ ತಲುಪಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)