ಶವ್ವಾಲ್ ಚಂದ್ರದರ್ಶನವಾಗದ ಹಿನ್ನೆಲೆ: ಸೌದಿ ಅರೇಬಿಯಾ, ಯುಎಇಯಲ್ಲಿ ಗುರುವಾರ ಈದ್ ಆಚರಣೆ
ಅಬುಧಾಬಿ: ಸೌದಿ ಅರೇಬಿಯಾದಲ್ಲಿ ಶವ್ವಾಲ್ ತಿಂಗಳ ಚಂದ್ರದರ್ಶ ಆಗದ ಕಾರಣ ಯುಎಇಯಲ್ಲಿ ಗುರುವಾರದಂದು ಈದುಲ್ ಫಿತ್ರ್ ಆಚರಿಸಲಾಗುವುದು ಎಂದು khaleej times ವರದಿ ಮಾಡಿದೆ. ಸೌದಿ ಆರೇಬಿಯಾದಲ್ಲಿ ಶವ್ವಾಲ್ ಚಂದ್ರ ದರ್ಶನ ಆಗದ ಕುರಿತು saudi gazette ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಮೇ 12ರಂದು ರಮಝಾನ್ ತಿಂಗಳು ಕೊನೆಯಾಗಲಿದೆ, ಮೇ13 ರಂದು ಈದುಲ್ ಫಿತ್ರ್ ಆಚರಿಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಸರಕಾರದ ವರದಿ ಪ್ರಕಾರ ಈದುಲ್ ಫಿತ್ರ್ ನಿಮಿತ್ತ ಯುಎಇ ಉದ್ಯೋಗಿಗಳಿಗೆ ಮೇ 11ರಿಂದ 15ರವರೆಗೆ ಐದು ದಿನಗಳ ರಾಷ್ಟ್ರೀಯ ರಜೆಯನ್ನು ಘೋಷಿಸಲಾಗಿದೆ ಎಂದು ತಿಳಿದು ಬಂದಿದೆ.
Next Story