varthabharthi


ರಾಷ್ಟ್ರೀಯ

ಕಾಂಗ್ರೆಸ್ಸಿನ ಕೋವಿಡ್ ಪರಿಹಾರ ಕಾರ್ಯಪಡೆಗಳಲ್ಲಿ ಗುಲಾಮ್ ನಬಿ ಆಝಾದ್ ಗೆ ಪ್ರಮುಖ ಹುದ್ದೆ

ವಾರ್ತಾ ಭಾರತಿ : 11 May, 2021

 ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ಜಿ -23 ನಾಯಕ ಗುಲಾಮ್ ನಬಿ ಆಝಾದ್ ಅವರನ್ನು ಪಕ್ಷದ ಕೋವಿಡ್ ಕಾರ್ಯಪಡೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

ಕಾಂಗ್ರೆಸ್ ನ ಉನ್ನತ ನಾಯಕ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಸರ್ಕಾರದ ಮೇಲೆ ಸತತ ವಾಗ್ದಾಳಿ ನಡೆಸುವುದನ್ನು ಗಮನಿಸಿದರೆ, ಈ ಕಾರ್ಯಪಡೆ ಪಕ್ಷದಲ್ಲಿ ಅಪಾರ ಮಹತ್ವವನ್ನು ಪಡೆದುಕೊಂಡಿದೆ.

ಕಾಂಗ್ರೆಸ್‌ನಲ್ಲಿ ಮುಕ್ತ ಮತ್ತು ನ್ಯಾಯಯುತ ಸಾಂಸ್ಥಿಕ ಚುನಾವಣೆಯನ್ನು ಕೋರಿ ಜಿ -23 ನಾಯಕರು ಕಳೆದ ವರ್ಷ ಪತ್ರ ಬರೆದ ನಂತರ ಗುಲಾಮ್ ನಬಿ ಆಝಾದ್ ಅವರಿಗೆ ನೀಡಲಾಗಿರುವ ಮೊದಲ ಪ್ರಮುಖ ಜವಾಬ್ದಾರಿ ಇದಾಗಿದೆ.

 ಗುಲಾಮ್ ನಬಿ ಆಝಾದ್ ಕಳೆದ ವಾರ ಆಕಸ್ಮಿಕವಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ಮುಂದೂಡುವ ನಿರ್ಧಾರವನ್ನು ಬೆಂಬಲಿಸಿದ್ದರು.

ಕಾಂಗ್ರೆಸ್ ಕೋವಿಡ್ ಕಾರ್ಯಪಡೆಯ ಇತರ ಸದಸ್ಯರಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ, ಪವನ್ ಕುಮಾರ್ ಬನ್ಸಾಲ್, ಮುಕುಲ್ ವಾಸ್ನಿಕ್ ಹಾಗೂ ಕೆ.ಸಿ.ವೇಣುಗೋಪಾಲ್ ಸೇರಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)