ಅಂತಾರಾಷ್ಟ್ರೀಯ ಮಾಧ್ಯಮ ಕಚೇರಿ ಇರುವ ಕಟ್ಟಡದ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ವರದಿ
ಗಾಝಾ ಸಿಟಿ: ಗಾಝಾ ಸಿಟಿಯಲ್ಲಿರುವ ಕತರ್ ಮೂಲದ ಅಲ್-ಜಝೀರಾ ದೂರದರ್ಶನ ಹಾಗೂ ಅಮೆರಿಕಾದ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ಕಚೇರಿ ಇರುವ 13 ಮಹಡಿಗಳ ಕಟ್ಟಡದ ಮೇಲೆ ಶನಿವಾರ ಇಸ್ರೇಲ್ ಸೈನ್ಯ ವೈಮಾನಿಕ ದಾಳಿ ನಡೆಸಿ ಕಟ್ಟಡ ದ್ವಂಸಗೊಳಿಸಿದೆ ಎಂದು ಎಎಫ್ಪಿ ಪತ್ರಕರ್ತರು ತಿಳಿಸಿದ್ದಾರೆ.
ಇಸ್ರೇಲ್ ಗಾಝಾ ಸಿಟಿಯಲ್ಲಿರುವ ಜಲ ಗೋಪುರವನ್ನು ನಾಶಪಡಿಸಿದೆ. ಇದರಲ್ಲಿ ಅಲ್-ಜಝೀರಾ ಟಿವಿಯ ಕಚೇರಿ ಹಾಗೂ ಇತರ ಅಂತಾರಾಷ್ಟ್ರೀಯ ಪತ್ರಿಕಾ ಕಚೇರಿಗಳಿವೆ ಎಂದು ಅಲ್-ಜಝೀರಾ ಟ್ವೀಟ್ ನಲ್ಲಿ ತಿಳಿಸಿದೆ.
ವೈಮಾನಿಕ ದಾಳಿಗೆ ಮುಂಚಿತವಾಗಿ ಇಸ್ರೇಲ್ ಸೇನೆಯು ಗೋಪುರದ ಮಾಲೀಕರಿಗೆ ಎಚ್ಚರಿಕೆ ನೀಡಿತ್ತು ಎಂದು ಎಪಿ ಪತ್ರಕರ್ತರೊಬ್ಬರು ಹೇಳಿದ್ದಾರೆ.
Oh my god. The building where al Jazeera’s office is housed has just been taken down by Israeli airstrikes. There was a warning and evacuated. It houses offices and private homes. I can’t believe it. pic.twitter.com/Q4luRYk9H9
— Stefanie Dekker (@StefanieDekker) May 15, 2021
VIDEO: IDF airstrike destroys the Al-Jalaa building in Gaza, used as the offices of AP and Al-Jazeera. pic.twitter.com/I1HCr3Ld5k
— Conflict News (@Conflicts) May 15, 2021