varthabharthi


ಅಂತಾರಾಷ್ಟ್ರೀಯ

ಪರಿಹಾರ ಕೊಡಿಸಲು ಏರ್ ಇಂಡಿಯವನ್ನು ಬದ್ಧಗೊಳಿಸಿ: ಬ್ರಿಟನ್ ಕಂಪೆನಿಯಿಂದ ಅಮೆರಿಕ ನ್ಯಾಯಾಲಯಕ್ಕೆ ಮನವಿ

ವಾರ್ತಾ ಭಾರತಿ : 15 May, 2021

 ನ್ಯೂಯಾರ್ಕ್, ಮೇ 15: ಭಾರತದ ವಿರುದ್ಧದ ತೆರಿಗೆ ವಿವಾದದಲ್ಲಿ, ತನಗೆ 1.2 ಬಿಲಿಯ ಡಾಲರ್ (ಸುಮಾರು 8,794 ಕೋಟಿ ರೂಪಾಯಿ) ಪರಿಹಾರ ನೀಡುವಂತೆ ನ್ಯಾಯಮಂಡಳಿಯೊಂದು ನೀಡಿರುವ ಆದೇಶವನ್ನು ಜಾರಿಗೊಳಿಸುವಂತೆ ಭಾರತದ ವಿಮಾನಯಾನ ಕಂಪೆನಿ ಏರ್ ಇಂಡಿಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಬ್ರಿಟನ್ನ ಕೇರ್ನ್ ಎನರ್ಜಿಯು ಅಮೆರಿಕದ ನ್ಯಾಯಾಲಯವೊಂದರಲ್ಲಿ ಮನವಿ ಸಲ್ಲಿಸಿದೆ.

ಕೇರ್ನ್ಗೆ 1.2 ಬಿಲಿಯ ಡಾಲರ್ ಪರಿಹಾರ, ಅದಕ್ಕೆ ಬಡ್ಡಿ ಮತ್ತು ಮೊಕದ್ದಮೆಯ ವೆಚ್ಚವನ್ನು ಕೊಡುವಂತೆ ಪಂಚಾಯಿತಿ ನ್ಯಾಯಮಂಡಳಿಯೊಂದು ಡಿಸೆಂಬರ್ನಲ್ಲಿ ಭಾರತ ಸರಕಾರಕ್ಕೆ ಆದೇಶ ನೀಡಿತ್ತು. ಭಾರತವು ಬ್ರಿಟನ್ನೊಂದಿಗಿನ ಹೂಡಿಕೆ ಒಪ್ಪಂದದ ಶರತ್ತುಗಳನ್ನು ಉಲ್ಲಂಸಿದೆ ಹಾಗೂ ಕೇರ್ನ್ ಕಂಪೆನಿಗೆ ಪರಿಹಾರ ನೀಡಲು ಅದು ಬದ್ಧವಾಗಿದೆ ಎಂದು ನ್ಯಾಯಮಂಡಳಿ ಹೇಳಿತ್ತು.

ಕೇರ್ನ್ ಪರವಾಗಿ ಪಂಚಾಯತ್ ನ್ಯಾಯಮಂಡಳಿಯು ನೀಡಿರುವ ತೀರ್ಪಿಗೆ ಏರ್ ಇಂಡಿಯವನ್ನು ಬದ್ಧವಾಗಿಸಬೇಕು ಎಂದು ಕೋರಿ ಅದು ನ್ಯೂಯಾರ್ಕ್ ದಕ್ಷಿಣ ಜಿಲ್ಲೆಯ ನ್ಯಾಯಾಲಯದಲ್ಲಿ ಶುಕ್ರವಾರ ಅರ್ಜಿ ಸಲ್ಲಿಸಿದೆ. ಏರ್ ಇಂಡಿಯವು ಸರಕಾರಿ ಒಡೆತನದ ಕಂಪೆನಿಯಾಗಿದ್ದು, ಕಾನೂನು ಪ್ರಕಾರ ಅದು ಸರಕಾರಕ್ಕಿಂತ ಬೇರೆಯಲ್ಲ ಎಂಬುದಾಗಿ ಅರ್ಜಿಯಲ್ಲಿ ವಾದಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)