varthabharthi


ರಾಷ್ಟ್ರೀಯ

ತೌಕ್ತೆ ಚಂಡಮಾರುತ

ವೈಮಾನಿಕ ಸಮೀಕ್ಷೆ ನಡೆಸಿ ಗುಜರಾತ್ ಗೆ 1,000 ಕೋಟಿ ರೂ. ನೆರವು ಪ್ರಕಟಿಸಿದ ಪ್ರಧಾನಿ ಮೋದಿ

ವಾರ್ತಾ ಭಾರತಿ : 19 May, 2021

ಹೊಸದಿಲ್ಲಿ: ತೌಕ್ತೆ ಚಂಡಮಾರುತದಿಂದ ತೀವ್ರವಾಗಿ ತತ್ತರಿಸಿರುವ ಗುಜರಾತ್‌ನಲ್ಲಿ ತಕ್ಷಣದ ಪರಿಹಾರ ಕಾರ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ  ಅವರು ಇಂದು  1,000 ಕೋಟಿ ರೂ. ನೆರವು ಘೋಷಿಸಿದ್ದಾರೆ.

ಗುಜರಾತ್‌ನ ಗಿರ್ ಸೋಮನಾಥ್, ಅಮ್ರೆಲಿ ಹಾಗೂ  ಭಾವನಗರ ಜಿಲ್ಲೆಗಳಲ್ಲಿ ಹಾಗೂ  ಡಿಯುನಲ್ಲಿ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ.

ಹಲವಾರು ರಾಜ್ಯಗಳಲ್ಲಿ ಚಂಡಮಾರುತ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟ ಪ್ರತಿಯೊಂದು ಕುಟುಂಬಗಳಿಗೆ ತಲಾ ರೂ. 2 ಲಕ್ಷ ಪರಿಹಾರವನ್ನು ಘೋಷಿಸಿದರು. ಇಂತಹ ಘಟನೆಗಳಲ್ಲಿ ಗಾಯಗೊಂಡವರಿಗೆ ರೂ. 50,000 ಮೊತ್ತವನ್ನು ನೀಡಲಾಗುವುದು.

"ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿರ್ಣಯಿಸಲು ಗುಜರಾತ್ ಹಾಗೂ  ಡಿಯು ಭಾಗಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದೇನೆ. ಚಂಡಮಾರುತದಿಂದ ಹಾನಿಗೊಳಗಾದ ಎಲ್ಲಾ ರಾಜ್ಯಗಳೊಂದಿಗೆ ಕೇಂದ್ರ ಸರಕಾರ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಪ್ರಧಾನಿ ಹೇಳಿದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)