ರಾಷ್ಟ್ರೀಯ
ರೈತರಿಗೆ ಶೇ.140 ರಸಗೊಬ್ಬರ ಸಬ್ಸಿಡಿ: ಕೇಂದ್ರ ಸರಕಾರ

ಹೊಸದಿಲ್ಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯನ್ನು ಸರಿದೂಗಿಸಲು ಕೇಂದ್ರವು ರಸಗೊಬ್ಬರಕ್ಕೆ ಶೇ. 140 ರಷ್ಟು ಸಬ್ಸಿಡಿ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಚೇರಿ ತಿಳಿಸಿದೆ. ಈ ಸಬ್ಸಿಡಿಗಾಗಿ ಸರಕಾರ ಹೆಚ್ಚುವರಿ 14,775 ಕೋಟಿ ರೂ. ಖರ್ಚು ಮಾಡುತ್ತದೆ.
"ಅಂತರರಾಷ್ಟ್ರೀಯ ಬೆಲೆ ಏರಿಕೆಯ ಹೊರತಾಗಿಯೂ ರೈತರು ಹಳೆಯ ದರದಲ್ಲಿ ರಸಗೊಬ್ಬರಗಳನ್ನು ಪಡೆಯಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ ... ರೈತರ ಕಲ್ಯಾಣವು ಸರಕಾರದ ಪ್ರಯತ್ನಗಳ ಕೇಂದ್ರಬಿಂದುವಾಗಿದೆ" ಎಂದು ಪ್ರಧಾನಿ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.
ರೈತರಿಗೆ ಒಂದು ಚೀಲ ರಸಗೊಬ್ಬರಕ್ಕೆ ರೂ. 500ರ ಬದಲಿಗೆ ರೂ. 1,200 ಸಬ್ಸಿಡಿ ಸಿಗುತ್ತದೆ. ಜಾಗತಿಕ ಬೆಲೆಗಳ ಏರಿಕೆಯ ನಂತರ ರೈತರು ಡಿಎಪಿ (ಡಿ-ಅಮೋನಿಯಂ ಫಾಸ್ಫೇಟ್) ಬ್ಯಾಗ್ ಅನ್ನು ರೂ. 1200 ನಲ್ಲಿ ಪಡೆಯುವುದನ್ನು ಮುಂದುವರಿಸುತ್ತಾರೆ
ಇಂದು ಸಂಜೆ ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಸಗೊಬ್ಬರ ಸಬ್ಸಿಡಿ ಹೆಚ್ಚಿಸುವ ನಿರ್ಧಾರ ಹೊರಬಂದಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಫಾಸ್ಪರಿಕ್ ಆ್ಯಸಿಡ್, ಅಮೋನಿಯಾ ಇತ್ಯಾದಿಗಳ ಬೆಲೆ ಏರಿಕೆಯಿಂದಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ










