ಕರ್ನಾಟಕ
ಒಂದೇ ದಿನ 468 ಮಂದಿ ಸೋಂಕಿಗೆ ಬಲಿ
ರಾಜ್ಯದಲ್ಲಿಂದು 34 ಸಾವಿರ ಮಂದಿಗೆ ಕೊರೋನ ಪಾಸಿಟಿವ್: 49,953 ಸೋಂಕಿತರು ಗುಣಮುಖ

ಬೆಂಗಳೂರು, ಮೇ 19: ರಾಜ್ಯದಲ್ಲಿ ಬುಧವಾರದಂದು 34,281 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 468 ಜನರು ಸೋಂಕಿಗೆ ಬಲಿಯಾಗಿದ್ದು, 49,953 ಜನರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 23,066,55ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 23,306ಕ್ಕೆ ತಲುಪಿದೆ.
ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 5,58,890ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
468 ಸೋಂಕಿತರು ಬಲಿ: ಬಾಗಲಕೋಟೆ 1, ಬಳ್ಳಾರಿ 23, ಬೆಳಗಾವಿ 11, ಬೆಂಗಳೂರು ಗ್ರಾಮಾಂತರ 13, ಬೆಂಗಳೂರು ನಗರ 218, ಬೀದರ್ 4, ಚಾಮರಾಜನಗರ 8, ಚಿಕ್ಕಬಳ್ಳಾಪುರ 9, ಚಿಕ್ಕಮಗಳೂರು 4, ಚಿತ್ರದುರ್ಗ 3, ದಕ್ಷಿಣ ಕನ್ನಡ 2, ದಾವಣಗೆರೆ 1, ಧಾರವಾಡ 10, ಗದಗ 5, ಹಾಸನ 9, ಹಾವೇರಿ 11, ಕಲಬುರಗಿ 18, ಕೊಡಗು 3, ಕೋಲಾರ 6, ಕೊಪ್ಪಳ 14, ಮಂಡ್ಯ 9, ಮೈಸೂರು 14, ರಾಯಚೂರು 3, ರಾಮನಗರ 6, ಶಿವಮೊಗ್ಗ 19, ತುಮಕೂರು 19, ಉಡುಪಿ 5, ಉತ್ತರ ಕನ್ನಡ 14, ವಿಜಯಪುರ 5, ಯಾದಗಿರಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 34,281 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 362, ಬಳ್ಳಾರಿ 1,297, ಬೆಳಗಾವಿ 2,234, ಬೆಂಗಳೂರು ಗ್ರಾಮಾಂತರ 812, ಬೆಂಗಳೂರು ನಗರ 11,772, ಬೀದರ್ 149, ಚಾಮರಾಜನಗರ 576, ಚಿಕ್ಕಬಳ್ಳಾಪುರ 555, ಚಿಕ್ಕಮಗಳೂರು 1,047, ಚಿತ್ರದುರ್ಗ 422, ದಕ್ಷಿಣ ಕನ್ನಡ 829, ದಾವಣಗೆರೆ 700, ಧಾರವಾಡ 871, ಗದಗ 486, ಹಾಸನ 1,428, ಹಾವೇರಿ 170, ಕಲಬುರಗಿ 440, ಕೊಡಗು 197, ಕೋಲಾರ 895, ಕೊಪ್ಪಳ 336, ಮಂಡ್ಯ 730, ಮೈಸೂರು 1,730, ರಾಯಚೂರು 469, ರಾಮನಗರ 304, ಶಿವಮೊಗ್ಗ 819, ತುಮಕೂರು 2,427, ಉಡುಪಿ 856, ಉತ್ತರ ಕನ್ನಡ 833, ವಿಜಯಪುರ 227, ಯಾದಗಿರಿ ಜಿಲ್ಲೆಯಲ್ಲಿ 308 ಪ್ರಕರಣಗಳು ಪತ್ತೆಯಾಗಿವೆ.
ರಾಜಧಾನಿಯಲ್ಲಿ 218 ಜನರು ಸಾವು
ರಾಜಧಾನಿಯಲ್ಲಿ ಬುಧವಾರದಂದು 11,772 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 218 ಜನರು ಮೃತಪಟ್ಟಿದ್ದಾರೆ. 29,238 ಸೋಂಕಿತರು ಬಿಡುಗಡೆಯಾಗಿದ್ದಾರೆ.
ನಗರದಲ್ಲಿ ಇಲ್ಲಿಯವರೆಗೆ ಒಟ್ಟು 10,84,844 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 10,238 ಜನರು ಸೋಂಕಿಗೆ ಬಲಿಯಾಗಿದ್ದಾರೆ. 7,51,324 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ










