varthabharthi


ನಿಧನ

ಕೃಷ್ಣಮೂರ್ತಿ

ವಾರ್ತಾ ಭಾರತಿ : 10 Jun, 2021

ಮಂಗಳೂರು, ಜೂ.10: ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನ ನಿವೃತ್ತ ಆಂಗ್ಲಭಾಷಾ ಪ್ರಾಧ್ಯಾಪಕ, ಚಿಂತಕ, ವಾಗ್ಮಿ, ಶಿರ್ವ ಮಂಚಕಲ್ ನಿವಾಸಿ ಕೃಷ್ಣ ಮೂರ್ತಿ (65) ಗುರುವಾರ ಬೆಳಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ ನಿವೃತ್ತ ಹಿಂದಿ ಭಾಷಾ ಉಪನ್ಯಾಸಕಿ ಡಾ.ಶಾರದಾ ಎಂ ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

ಮೂಲತಃ ಕಾಸರಗೋಡು ಬದಿಯಡ್ಕ ಸಮೀಪದ ನೀರ್ಚಾಲು ಗ್ರಾಮದ ಕುಮಾರಮಂಗಲದವರಾದ ಕೃಷ್ಣಮೂರ್ತಿ ಆಂಗ್ಲ ಭಾಷೆ, ಸಾಹಿತ್ಯದಲ್ಲಿ ಪಾಂಡಿತ್ಯವಲ್ಲದೆ ಅಪಾರ ವಿದ್ವತ್ ಹೊಂದಿದ್ದರು. ಯಾವುದೇ ವಿಷಯದ ಕುರಿತು ನಿರರ್ಗಳವಾಗಿ ಮಾತನಾಡುವ ಚಾಕಚಕ್ಯತೆಯನ್ನು ಕೃಷ್ಣಮೂರ್ತಿ ಹೊಂದಿದ್ದರು.

ಮೃತರ ಅಂತ್ಯಕ್ರಿಯೆಯು ಅವರ ಕುಮಾರಮಂಗಲದಲ್ಲಿ ನಡೆಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)