varthabharthi


ಅಂತಾರಾಷ್ಟ್ರೀಯ

ಬ್ರಿಟನ್ ಪ್ರಧಾನಿಯ ಸಹಾಯಕನ ಸ್ನೇಹಿತರಿಗೆ ಕಾನೂನುಬಾಹಿರ ಗುತ್ತಿಗೆ ನೀಡಲಾಗಿದೆ: ಬ್ರಿಟನ್ ಹೈಕೋರ್ಟ್ ತೀರ್ಪು

ವಾರ್ತಾ ಭಾರತಿ : 10 Jun, 2021

ಲಂಡನ್, ಜೂ. 10: ಬ್ರಿಟನ್ ಸರಕಾರವು ಸಂಪರ್ಕ ಇಲಾಖೆಯ ಗುತ್ತಿಗೆಯೊಂದನ್ನು ಪ್ರಧಾನಿ ಬೊರಿಸ್ ಜಾನ್ಸನ್ ರ ಪ್ರಮುಖ ಸಹಾಯಕರೊಬ್ಬರ ಸ್ನೇಹಿರಿಗೆ ಕಾನೂನುಬಾಹಿರವಾಗಿ ನೀಡಿದೆ ಎಂದು ದೇಶದ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ.

‌ಕಳೆದ ವರ್ಷ ಕೊರೋನ ವೈರಸ್ ಸಾಂಕ್ರಾಮಿಕದ ಅವಧಿಯಲ್ಲಿ ಸಾಮಗ್ರಿಗಳನ್ನು ಪೂರೈಕೆ ಮಾಡುವ ಆಕರ್ಷಕ ಗುತ್ತಿಗೆಗಳನ್ನು ತನಗೆ ಬೇಕಾದವರಿಗೆ ನೀಡಿದ್ದಾರೆ ಹಾಗೂ ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ ಎಂಬ ಆರೋಪಗಳನ್ನು ಜಾನ್ಸನ್ ಎದುರಿಸುತ್ತಿರುವಂತೆಯೇ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ.

ಸಾರ್ವಜನಿಕರ ಅಭಿಪ್ರಾಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸರಕಾರಕ್ಕೆ ನೀಡುವುದು ಹಾಗೂ ಸಾರ್ವಜನಿಕ ಆರೋಗ್ಯ ಘೋಷವಾಕ್ಯಗಳ ಪರಿಣಾಮವನ್ನು ಪರೀಕ್ಷಿಸುವುದಕ್ಕೆ ಸಂಬಂಧಿಸಿದ ಗುತ್ತಿಗೆ ಅದಾಗಿತ್ತು.

ಸಾಂಕ್ರಾಮಿಕದ ಅವಧಿಯಲ್ಲಿ ಸಾಮಾಗ್ರಿಗಳ ಪೂರೈಕೆಗಳು ಮತ್ತು ಸೇವೆಗಳಿಗಾಗಿ ಬ್ರಿಟನ್ ಸರಕಾರ ಖರ್ಚು ಮಾಡಿರುವ 18 ಬಿಲಿಯ ಪೌಂಡ್ (ಸುಮಾರು 1.86 ಲಕ್ಷ ಕೋಟಿ ರೂಪಾಯಿ) ಮೊತ್ತವನ್ನು ಸ್ಪಷ್ಟವಾಗಿ ದಾಖಲಿಸುವಲ್ಲಿ ಬ್ರಿಟನ್ ಸರಕಾರ ವಿಫಲವಾಗಿದೆ ಎಂಬುದಾಗಿ ಸರಕಾರದ ಲೆಕ್ಕಪರಿಶೋಧಕರು ಕಳೆದ ವರ್ಷ ಹೇಳಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)