varthabharthi


ಕರಾವಳಿ

ಸೋಂಕಿತರ ಸೇವೆಗೆ ಮೊದಲ ಆದ್ಯತೆ ನೀಡಿ: ವಿನಯ ಕುಮಾರ್ ಸೂರಕೆ

ವಾರ್ತಾ ಭಾರತಿ : 10 Jun, 2021

ಪಡುಬಿದ್ರಿ: ಕೊರೂನಾ ಸೋಂಕಿತರ ಸೇವೆಗೆ  ಕಾಂಗ್ರೆಸ್ ಕಾರ್ಯಕರ್ತರು ಮೊದಲ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್ ಸೂರಕೆ ಕರೆ ನೀಡಿದರು.  

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ಲಾಕ್‍ಡೌನ್  ಸಂದರ್ಭದಲ್ಲಿ  ಸಂಕಷ್ಟದಿಂದ ಬಳಲುತಿರುವ ಹೆಜಮಾಡಿ ಗ್ರಾಮದ  ಬಡ ಕುಟುಂಬಗಳಿಗೆ ಸುಮಾರು 300  ಅಹಾರ ಕಿಟ್‍ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವ್ಯೆ ಸುಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಲ್ಪಿ ಡಿ ಕೋಸ್ತ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೂರಾಜ್ ಹೆಜಮಾಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಹಮ್ಮದ್ ಕಬೀರ್, ನಿರ್ಮಲ, ಫರೀದಾ, ಸುಭಾಶ್ ಸಾಲ್ಯಾನ್,  ಕುಸುಮ ಸಾಲ್ಯಾನ್, ಲಿಡಿಯಾ ಪೂರ್ಟಾಡು , ಕಾಪು ಬ್ಲಾಕ್ ಕಾಂಗ್ರೆಸ್ ಎಸ್.ಸಿ, ಎಎಸ್.ಟಿ ಸಮಿತಿ ಅಧ್ಯಕ್ಷ ಕೇಶವ ಸಾಲ್ಯಾನ್, ಸಮಾಜ ಸೇವಕ ಹಾಜಿ ಶೇಕಬ್ಬ ಕೆ.ಎಸ್,  ಹೆಜಮಾಡಿ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಇಕ್ಬಾಲ್, ಹೆಜಮಾಡಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೀನಾ ವಿನುತಾ ಡಿ "ಸೋಜ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಅಜೀಜ್ ಮಹಮ್ಮದ್ ಶರೀಫ್, ದಿನೇಶ್ ಸಾಲ್ಯಾನ್  ಉಪಸ್ಥಿತರಿದ್ದರು. 

ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕರ್ಕೇರ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡ ಸುಧಾಕರ್ ಕೆ ನಿರೂಪಿಸಿದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)