varthabharthi


ಕರಾವಳಿ

ಹಳೇಕೋಟೆಯಲ್ಲಿ ಗುಡ್ಡ ಕುಸಿತ; ವೆಲ್ಫೇರ್ ಪಾರ್ಟಿಯಿಂದ ಪೌರಾಯುಕ್ತಗೆ ಮನವಿ

ವಾರ್ತಾ ಭಾರತಿ : 14 Jun, 2021

ಮಂಗಳೂರು : ಉಳ್ಳಾಲ ನಗಸಭಾ ವ್ಯಾಪ್ತಿಯ ಹಳೆಕೋಟೆಯಲ್ಲಿ ಗುಡ್ಡ ಕುಸಿತದಿಂದಾಗಿ ತೀವ್ರ ಅಪಾಯದ ಭೀತಿಯಲ್ಲಿದ್ದ ಸ್ದಳೀಯ‌ರು ವೆಲ್ಫೇರ್ ಪಾರ್ಟಿಯ ಸಹಕಾರದೊಂದಿಗೆ ಉಳ್ಳಾಲ ನಗರ ಸಭಾ ಪೌರಾಯುಕ್ತ ರಾಯಪ್ಪ ಅವರನ್ನು ಭೇಟಿಯಾಗಿ‌ ಇತ್ತೀಚೆಗೆ ಮನವಿ ಸಲ್ಲಿಸಿದರುವುದಾಗಿ ವೆಲ್ಫೇರ್ ಪಾರ್ಟಿ ಆಪ್ ಇಂಡಿಯಾ ಇದರ ಉಳ್ಳಾಲ ವಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವೆಲ್ಫೇರ್ ಪಾರ್ಟಿ ತಂಡಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ ‌ಪೌರಾಯುಕ್ತರು ವಿಷಯದ ಕುರಿತಂತೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ, ವಾರದೊಳಗೆ ಪರಿಹರಿಸುವ ಭರವಸೆಯನ್ನು ಮನವಿದಾರರ ಸಮ್ಮುಖದಲ್ಲಿಯೇ ನೀಡಿದ್ದಲ್ಲದೆ, ನಂತರ ಮಾತನಾಡಿದ ರಾಯಪ್ಪನವರು, ಒಂದು ವಾರದೊಳಗೆ ಅಲ್ಲಿನ, ಪ್ರಸಕ್ತ ಸಮಸ್ಯೆಗಳನ್ನೆಲ್ಲಾ ತಾನೇ ಖುದ್ದಾಗಿ ಪರಿಶೀಲಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ತಿಳಿಸಿದ್ದರು.

ಪ್ರಸ್ತುತ ವೆಲ್ಫೇರ್ ಪಾರ್ಟಿ ನಿಯೋಗದಲ್ಲಿ ವೆಲ್ಫೇರ್ ಪಾರ್ಟಿ ಹಳೇಕೊಟೆ ವಾರ್ಡ್ ಅಧ್ಯಕ್ಷ ಮನ್ಸೂರ್ ಯು.ಎಂ., ವಲಯ ‌ಸಮಿತಿ‌ ಸದಸ್ಯ ಅಬ್ದುಲ್ ಸಲಾಂ ಸಿ.ಎಚ್, ಶಾಕೀರ್ ಕೆರೆಬೈಲ್ ಹಾಗೂ ಸ್ಥಳೀಯರಾದ ಅಬ್ದುಲ್ ರಹ್ಮಾನ್, ಪರ್ವಿಝ್, ಶಮೀರ್, ಬಶೀರ್ ಹಾಗೂ ಇತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)