ರೀಟಾ ರೋಚ್
ಬ್ರಕ್ಮಾವರ : ಸಾಸ್ತಾನ ಮೂಡಹಡು ಗ್ರಾಮದ ನಿವಾಸಿ ಜೂಲಿಯಸ್ ರೋಚ್ರ ಪತ್ನಿ ರೀಟಾ ರೋಚ್ (56) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಿಧನರಾದರು.
ಕೃಷಿಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು, ಓರ್ವ ಉತ್ತಮ ಕೃಷಿಕರಾಗಿ ಹಾಗೂ ಹೈನುಗಾರಿಕೆಯಲ್ಲಿ ಪರಿಸರದಲ್ಲಿ ಪ್ರಖ್ಯಾತಿ ಪಡೆದು ಗುರುತಿಸಿಕೊಂಡಿದ್ದರು.
ಪರಿಸರದ ಮಹಿಳೆಯರನ್ನು ಒಗ್ಗೂಡಿಸಿ ಕ್ರಿಸ್ಮಸ್ ಸಂದರ್ಭದಲ್ಲಿ ಇವರ ನೇತೃತ್ವದಲ್ಲಿ ತಯಾರಿಸುವ ಕುಸ್ವಾರ್ ತಿಂಡಿ ತಿನಿಸುಗಳಿಗೆ ಊರ, ಪರ ಊರ ಮತ್ತು ವಿದೇಶದಲ್ಲಿರುವರಿಂದ ವಿಪರೀತ ಬೇಡಿಕೆ. ಹಪ್ಪಳಗಳ ತಯಾರಿಕೆಯಲ್ಲಿ ತುಂಬಾ ಪ್ರಸಿದ್ಧಿಯಾಗಿದ್ದರು. ಪರಿಸರದ ಅನೇಕ ಸ್ವಸಹಾಯ ಗುಂಪುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story