ಪತ್ರಿಕಾಗೋಷ್ಠಿಯಲ್ಲಿ ತನ್ನೆದುರಿಗಿದ್ದ ಬಿಯರ್ ಬಾಟಲ್ ನ್ನು ಬದಿಗಿಟ್ಟ ಪೌಲ್ ಪೊಗ್ಬಾ
ರೊನಾಲ್ಡೊ ಹೆಜ್ಜೆ ಅನುಸರಿಸಿದ ಫ್ರಾನ್ಸ್ ಫುಟ್ಬಾಲ್ ಆಟಗಾರ
photo: twitter
ಮ್ಯೂನಿಚ್: ಯುಇಎಫ್ಎ ಯುರೋ ಟೂರ್ನಮೆಂಟ್ ನಲ್ಲಿ ಜರ್ಮನಿಯ ವಿರುದ್ಧ ಫ್ರಾನ್ಸ್ ತಂಡ 1-0 ಜಯ ಸಾಧಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಫ್ರಾನ್ಸ್ ಫುಟ್ಬಾಲ್ ಸ್ಟಾರ್ ಪೌಲ್ ಪೊಗ್ಬಾ ಅವರು ತಮ್ಮ ಮುಂದೆ ಇಟ್ಟಿದ್ದ ಬಿಯರ್ ಬಾಟಲಿಯನ್ನುತೆಗೆದು ಪಕ್ಕಕ್ಕಿಟ್ಟ ಘಟನೆ ನಡೆದಿದೆ.
ಈಗ ನಡೆಯುತ್ತಿರುವ ಯುರೋ 2020 ಫುಟ್ಬಾಲ್ ಪಂದ್ಯಾವಳಿಯ ಕುರಿತ ಪತ್ರಿಕಾಗೋಷ್ಠಿ ವೇಳೆ ಈ ರೀತಿ ನಡೆದುಕೊಂಡಿರುವ ಎರಡನೇ ಆಟಗಾರ ಪೊಗ್ಬಾ ಆಗಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ಮಿಡ್ ಫೀಲ್ಡರ್ ಪೊಗ್ಬಾ ಮುಸ್ಲಿಂ ಆಗಿದ್ದು, ಅವರು ಮದ್ಯಪಾನ ಮಾಡುವುದಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ತನ್ನ ಮುಂದೆ ಇಟ್ಟಿದ್ದ ಕೋಕಾ-ಕೋಲಾ ಬಾಟಲಿಗಳನ್ನು ತೆಗೆದು ಎಲ್ಲರೂ ನೀರನ್ನು ಕುಡಿಯುವಂತೆ ಪ್ರೋತ್ಸಾಹಿಸಿದ್ದರು
ಫ್ರಾನ್ಸ್ ತಂಡ ಡಿಫೆಂಡರ್ ಮ್ಯಾಟ್ಸ್ ಹಮ್ಮೆಲ್ಸ್ ಅವರು 20 ನೇ ನಿಮಿಷದಲ್ಲಿ ಗಳಿಸಿದ ಸ್ವಯಂ ಗೋಲು ನೆರವಿನಿಂದ ಜರ್ಮನಿಯ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿತ್ತು.
ಮೂರು ಅಂಕ ಗಳಿಸಿರುವ ಫ್ರಾನ್ಸ್ ಗ್ರೂಪ್ ಎಫ್ ನಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿದೆ, ಫ್ರಾನ್ಸ್ ಜೂನ್ 19 ರಂದು ಹಂಗೇರಿಯನ್ನು ಎದುರಿಸಲಿದ್ದು, ಜೂನ್ 24 ರಂದು ಪೋರ್ಚುಗಲ್ ತಂಡವನ್ನು ಎದುರಿಸಲಿದೆ.
Pogba doing a Ronaldo pic.twitter.com/Tsbdgjv24n
— ESPN FC (@ESPNFC) June 16, 2021