varthabharthi


ರಾಷ್ಟ್ರೀಯ

ಲೈಂಗಿಕ ಕಿರುಕುಳ ಆರೋಪಿ ಶಿವಶಂಕರ ಬಾಬಾ ದಿಲ್ಲಿಯಲ್ಲಿ ಬಂಧನ

ವಾರ್ತಾ ಭಾರತಿ : 16 Jun, 2021

ಚೆನ್ನೈ, ಜೂ.17: ಶಾಲಾ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಧಾರ್ಮಿಕ ಮುಖಂಡ ಶಿವಶಂಕರ ಬಾಬಾನನ್ನು ದಿಲ್ಲಿಯ ಪೊಲೀಸರು ಬುಧವಾರ ಬಂಧಿಸಿರುವುದಾಗಿ ವರದಿಯಾಗಿದೆ. ಈ ಪ್ರಕರಣವನ್ನು ಚೆನ್ನೈ ಪೊಲೀಸರಿಂದ ಅಪರಾಧ ತನಿಖಾ ಇಲಾಖೆಯ ಅಪರಾಧ ಶಾಖೆ(ಸಿಬಿಸಿಐಡಿ)ಗೆ ವಹಿಸಿದ ಬಳಿಕ ಬಾಬಾ ಚೆನ್ನೈಯಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದ. 

ಈತನ್ನು ದಿಲ್ಲಿ ಹೊರವಲಯದ ಸ್ಥಳವೊಂದರಿಂದ ಬುಧವಾರ ಬಂಧಿಸಲಾಗಿದೆ. ಚೆನ್ನೈಯ ಕೇಳಂಬಾಕಂನ ಸುಶಿಲ್ ಹರಿ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ನ ಸ್ಥಾಪಕನಾಗಿರುವ ಬಾಬಾನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ದಾಖಲಾಗಿದೆ. ತಾವು ಶಾಲೆಯಲ್ಲಿ ಕಲಿಯುತ್ತಿದ್ದ ಸಂದರ್ಭ ಬಾಬಾ ತಮಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಸಂಸ್ಥೆಯ ಕೆಲವು ಹಳೆಯ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)