varthabharthi


ಕರ್ನಾಟಕ

ಡ್ರಗ್ಸ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸಲಾಗಿದೆ: ನಟಿ ರಾಗಿಣಿ ದ್ವಿವೇದಿ

ವಾರ್ತಾ ಭಾರತಿ : 17 Jun, 2021

ವಿಜಯಪುರ, ಜೂ.17: ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸಲಾಗಿದೆ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದರು.

ವಿಜಯಪುರದಲ್ಲಿ ಮಾತನಾಡಿದ ಅವರು, ಡ್ರಗ್ಸ್ ವಿಚಾರದಲ್ಲಿ ನೂರು ಶೇಕಡಾ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿದರು. ಬರೀ ಡ್ರಗ್ಸ್ ಒಂದು ಕೇಸ್ ವಿಚಾರವಾಗಿ ಮಾತ್ರವಲ್ಲ, ಸಮಾಜದಲ್ಲಿ ಹೆಣ್ಮಕ್ಕಳನ್ನು ಟಾರ್ಗೆಟ್ ಮಾಡಲಾಗುತ್ತದೆ ಎಂದರು.

ಪ್ರಶಾಂತ ಸಂಬರಗಿ ನಿಜವಾಗಿಯೂ ನನಗೆ ಪರಿಚಯವಿಲ್ಲ. ಅವರೊಂದಿಗೆ ನಾನು ಯಾವುದೇ ವಿಚಾರ ಅವರೊಂದಿಗೆ ಶೇರ್ ಮಾಡಿಲ್ಲ. ಕಾಸ್ಟಿಂಗ್ ಕೌಚ್ ಅನ್ನೋದು ನನ್ನ ಪ್ರಕಾರ ಒಂದು ಸ್ಟುಪಿಡ್ ವರ್ಡ್ಸ್. ಇದು ಜೀವನದ ಪಯಣದ ಮೇಲೆ ಡಿಪೆಂಡ್ ಆಗಿರುತ್ತದೆ. ಕಾಸ್ಟಿಂಗ್ ಕೌಚ್ ನಲ್ಲಿ ನನಗೆ ಅನುಭವ ಆಗಿಲ್ಲ ಎಂದರು‌.

ಜೀವನದಲ್ಲಿ ಎರಡು ತರಹದ ಜೀವನ ಇದೆ. ಒಂದು ಶಾರ್ಟ್ ಕಟ್ ಮತ್ತೊಂದು ಲಾಂಗ್ ಲೈಫ್. ಅದಕ್ಕಾಗಿ ಕಷ್ಟಪಟ್ಟರೆ ನಾವು ಜೀವನದ ಉದಕ್ಕೂ ಬೆಳೆಯುತ್ತೇವೆ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)