ಮಿಲ್ಖಾ ಸಿಂಗ್ ನಿಧನಕ್ಕೆ ತೋಳಿಗೆ ಕಪ್ಪುಪಟ್ಟಿ ಧರಿಸಿ ಗೌರವ ಸಲ್ಲಿಸಿದ ಭಾರತೀಯ ಕ್ರಿಕೆಟಿಗರು
ಸೌತಾಂಪ್ಟನ್: ರೋಸ್ ಬೌಲ್ನಲ್ಲಿ ಶನಿವಾರ ಆರಂಭವಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಆರಂಭಕ್ಕೆ ಮೊದಲು ರಾಷ್ಟ್ರಗೀತೆ ನುಡಿಸುತ್ತಿದ್ದಾಗ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ತೋಳಿಗೆ ಕಪ್ಪು ಪಟ್ಟಿ ಧರಿಸಿ 'ಫ್ಲೈಯಿಂಗ್ ಸಿಖ್' ಖ್ಯಾತಿಯ ಮಿಲ್ಖಾ ಸಿಂಗ್ ಅವರಿಗೆ ಗೌರವ ಸಲ್ಲಿಸಿದರು.
ಭಾರತೀಯ ಅಥ್ಲೀಟ್ ದಂತಕತೆ ಮಿಲ್ಖಾ ಸಿಂಗ್ ಕೋವಿಡ್ -19 ಸಂಬಂಧಿತ ಸಮಸ್ಯೆಗಳಿಂದಾಗಿ ಶುಕ್ರವಾರ ರಾತ್ರಿ ನಿಧನರಾದರು.
ವಿರಾಟ್ ಕೊಹ್ಲಿ, ರಿಷಭ್ ಪಂತ್ ಹಾಗೂ ಮುಖ್ಯ ಕೋಚ್ ರವಿ ಶಾಸ್ತ್ರಿ ಸೇರಿದಂತೆ ಟೆಸ್ಟ್ ತಂಡದಲ್ಲಿರುವ ಹಾಲಿ ಭಾರತೀಯ ಆಟಗಾರರು ಟ್ವಿಟರ್ನಲ್ಲಿ ಒಲಿಂಪಿಯನ್ಗೆ ಗೌರವ ಸಲ್ಲಿಸಿದರು. ಕೋವಿಡ್-19 ಕಾರಣದಿಂದ ನಿಧನರಾಗಿರುವ 'ಫ್ಲೈಯಿಂಗ್ ಸಿಖ್' ಖ್ಯಾತಿಯ ಮಿಲ್ಖಾ ಸಿಂಗ್ ಅವರಿಗೆ ಟೀಮ್ ಇಂಡಿಯಾ ಸದಸ್ಯರು ತೋಳಲ್ಲಿ ಕಪ್ಪು ಪಟ್ಟಿ ಧರಿಸಿ ಗೌರವ ಸಲ್ಲಿಸಿದ್ದಾರೆ ಎಂದು ಟ್ವಿಟರ್ ನಲ್ಲಿ ಬಿಸಿಸಿಐ ಸಂದೇಶವನ್ನು ಬರೆದಿದೆ.
Next Story