varthabharthi


ನಿಧನ

ಸುಧಾಕರ್ ಶೆಟ್ಟಿ

ವಾರ್ತಾ ಭಾರತಿ : 20 Jun, 2021

ಉಡುಪಿ, ಜೂ.20: ಹಿರಿಯಡ್ಕ ಪುತ್ತಿಗೆಯ ನಿವಾಸಿ ಸಮಾಜ ಸೇವಕ ಸುಧಾಕರ್ ಶೆಟ್ಟಿ ಮಟ್ಟಿಬೈಲು(56) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಸಾಮಾಜಿಕ ಚಟುವಟಿಕೆ ಹಾಗೂ ಪುತ್ತಿಗೆ ಸೇತುವೆ ಉಳಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿ ಕೊಂಡು, ಕಾಪು ಕ್ಷೇತ್ರದ ಮಾಜಿ ಶಾಸಕ ಭಾಸ್ಕರ್ ಶೆಟ್ಟಿ ಅವರ ಜೊತೆ ನಂಟು ಹೊಂದಿದ್ದ ಇವರು, ನಂತರ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದರು.

ಇವರು ಪರ್ಕಳ ಶಾಮರಾಯ ಸರ್ಕಲ್ ಬಳಿ ಕಟ್ಟಿಗೆ ಡಿಪೋ ಮತ್ತು ಫರ್ನಿ ಚರ್ ಅಂಗಡಿ ಹೊಂದಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)