varthabharthi


ಬೆಂಗಳೂರು

ಬೆಡ್ ಬ್ಲಾಕಿಂಗ್ ಪ್ರಕರಣದ ಹಿಂದೆ ನಮ್ಮವರದ್ದೇ ಷಡ್ಯಂತ್ರ: ಬಿಜೆಪಿ ಶಾಸಕ ಸತೀಶ್‍ ರೆಡ್ಡಿ

ವಾರ್ತಾ ಭಾರತಿ : 22 Jun, 2021

ಬೆಂಗಳೂರು, ಜೂ.22: ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಕೋವಿಡ್ ಬೆಡ್ ಬ್ಲಾಕಿಂಗ್ ದಂಧೆಯ ವಿಚಾರವಾಗಿ ಬಿಜೆಪಿ ಹಿರಿಯರಿಗೆ ಲಿಖಿತವಾಗಿ ದೂರು ನೀಡಿದ್ದೇನೆ. ಈ ಬಗ್ಗೆ ಕೂಲಂಕಷವಾಗಿ ವಿಚಾರಿಸುವುದಾಗಿ ಭರವಸೆ ನೀಡಿದ್ದಾರೆಂದು ಶಾಸಕ ಸತೀಶ್‍ ರೆಡ್ಡಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಅವರು, ಬೆಡ್ ಬ್ಲಾಕಿಂಗ್ ಪ್ರಕರಣದ ಹಿಂದೆ ನಮ್ಮವರದ್ದೇ ಷಡ್ಯಂತ್ರ ಇದೆ ಎಂದು ಕೆಲವರು ಈಗಾಗಲೇ ದೂರಿದ್ದಾರೆ. 4,500 ಬೆಡ್ ಹಗರಣ ಬಯಲಿಗೆ ಎಳೆದೆ. ಆದರೆ, ಈ ದಂಧೆಯನ್ನು ಬಯಲಿಗೆಳೆದ ನನ್ನ ಮೇಲೆಯೇ ಆರೋಪ ಮಾಡಿದ್ದು ನನಗೆ ಬೇಸರ ಮೂಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಡ್ ಬ್ಲಾಕ್ ದಂಧೆಯಲ್ಲಿ ಸಂಬಂಧ ಇಲ್ಲದೇ ಇರದ ವ್ಯಕ್ತಿಗಳನ್ನು ನನ್ನ ಹೆಸರ ಜತೆ ಜೋಡಿಸಿದ್ದಾರೆ. ನಾವು 4,500 ಬೆಡ್ ವಿಚಾರ ಎತ್ತಿದ್ದು, ಸರಕಾರದ ಕೆಲವರಿಗೆ ಮುಜುಗರ ಆಗಿದೆ. ಕೆಲ ಅಧಿಕಾರಿಗಳು ಮಿಸ್‍ಗೈಡ್ ಮಾಡಿ ಕೋಟ್ಯಂತರ ಅವ್ಯವಹಾರ ಮಾಡಿದ್ದಾರೆ. ಅಂತವರ ವಿರುದ್ಧ ಕ್ರಮ ಆಗಬೇಕು. ನನ್ನ ಅಭಿವೃದ್ದಿ ಸಹಿಸಲು ಸಾಧ್ಯವಾಗದೇ ಈ ರೀತಿ ಮಾಡಿದ್ದಾರೆ. ಅವರಿಗೆ ಭಗವಂತ ಒಳ್ಳೇದು ಮಾಡಲಿ ಎಂದು ಅವರು ತಿಳಿಸಿದ್ದಾರೆ.

ಈ ದಂಧೆಯನ್ನು ಬೊಮ್ಮನಹಳ್ಳಿ ಬಾಬು ಮಾಡಿದ್ದಾನೆ ಎಂಬ ಆರೋಪಿಸಲಾಗುತ್ತಿದೆ. ಆದರೆ, ಬಂಧಿತ ಬಾಬು ಜತೆ ನನಗೆ ಸಂಪರ್ಕವೇ ಇಲ್ಲ. ನನ್ನ ಜೊತೆ ಆಪ್ತನಾಗಿದ್ದರೆ ಕನಿಷ್ಠ ಆರು ತಿಂಗಳಾದರೂ ಹತ್ತಿರ ಇದ್ದಿರಬೇಕು. ಇಲ್ಲವೇ ಕನಿಷ್ಠ ಕರೆಯಾದರೂ ಮಾಡಬೇಕು. ಹೀಗಾಗಿ ಆತನ ಜತೆ ನನಗೆ ಯಾವುದೇ ಸಂಪರ್ಕವಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)