ತುಳು ಅಸ್ಮಿತೆಯ ಅವಮಾನ ಖಂಡನೀಯ: ತುಳುವೆರೆ ಪಕ್ಷ
ಬೆಳ್ತಂಗಡಿ: ಉಡುಪಿ-ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆಯವರು ಇತ್ತೀಚೆಗೆ ತುಳು ರಾಜ್ಯದ ಬೇಡಿಕೆಯು ಕುಚೋದ್ಯದ ಬೇಡಿಕೆ ಎಂದಿದ್ದು ಸರಿಯಲ್ಲ. ತುಳುವೆರೆ ಪಕ್ಷ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ಆದ್ಯಕ್ಷ ಶೈಲೇಶ್ ಆರ್.ಜೆ ಹಾಗೂ ತಾಲೂಕು ಅಧ್ಯಕ್ಷ ಪ್ರಶಾಂತ್ ಎಂ ತಿಳಿಸಿದ್ದಾರೆ.
ಕನ್ನಡ ಏಕೀಕರಣ ಚಳವಳಿಯನ್ನು ಸಮರ್ಥಿಸಿರುವ ಇವರು ಅದೇ ತುಳು ಏಕೀಕರಣ ಚಳವಳಿಯನ್ನು ಕುಚೋದ್ಯದ ಬೇಡಿಕೆ ಎಂದಿದ್ದು ಇವರ ದ್ವಿಮುಖ ನೀತಿಯನ್ನು ತೋರಿಸುತ್ತದೆ. ತುಳುವರ ನಾಡು ನುಡಿಯ ಹೋರಾಟವನ್ನು ಅವಮಾನಿಸುವ ಮೂಲಕ ಸಮಸ್ತ ತುಳುವರ ಭಾವನೆಗಳಿಗೆ ನೋವು ತಂದಿದ್ದಾರೆ. ತುಳು ಅಸ್ಮಿತೆಯ ವಿಚಾರಗಳನ್ನು ಯಾರೇ ಕುಚೋದ್ಯ ಮಾಡಿದರೂ ಅದನ್ನು ತುಳುವೆರೆ ಪಕ್ಷ ಖಂಡಿಸುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story