ಭಾರತ 170 ರನ್ ಗೆ ಆಲೌಟ್: ನ್ಯೂಝಿಲ್ಯಾಂಡ್ ಗೆಲುವಿಗೆ 139 ರನ್ ಗುರಿ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್
photo: AP
ಸೌತಾಂಪ್ಟನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಗೆಲುವಿಗೆ ಭಾರತವು ನ್ಯೂಝಿಲ್ಯಾಂಡ್ ತಂಡಕ್ಕೆ 139 ರನ್ ಗುರಿ ನೀಡಿದೆ.
ಆರನೇ ದಿನವಾದ ಬುಧವಾರ 2 ವಿಕೆಟ್ ನಷ್ಟಕ್ಕೆ 64 ರನ್ ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ 73 ಓವರ್ ಗಳಲ್ಲಿ ಕೇವಲ 170 ರನ್ ಗೆ ಗಂಟುಮೂಟೆ ಕಟ್ಟಿತು. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ (41)ಸರ್ವಾಧಿಕ ಸ್ಕೋರ್ ಗಳಿಸಿದರು. ರೋಹಿತ್ ಶರ್ಮಾ 30 ರನ್ ಗಳಿಸಿದರು. ನಾಯಕ ಕೊಹ್ಲಿ ಸಹಿತ ಉಳಿದೆಲ್ಲಾ ಆಟಗಾರರು ದೊಡ್ಡ ಮೊತ್ತ ಗಳಿಸಲು ವಿಫಲರಾದರು.
ಟಿಮ್ ಸೌಥಿ(4-48), ಟ್ವೆಂಟ್ ಬೌಲ್ಟ್ (3-39) ಹಾಗೂ ಜಮೀಸನ್ (2-30) ಅವರ ನಿಖರ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ 170 ರನ್ ಗೆ ಆಲೌಟಾಯಿತು.
ಇಂದು ಬ್ಯಾಟಿಂಗ್ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕೊಹ್ಲಿ 13 ರನ್ ಗಳಿಸಿ ಔಟಾದರೆ, ಪೂಜಾರ 15 ರನ್ ಗೆ ವಿಕೆಟ್ ಒಪ್ಪಿಸಿದರು.
Next Story