varthabharthi


ರಾಷ್ಟ್ರೀಯ

ಡೆಲ್ಟಾ ಪ್ಲಸ್ ಭೀತಿಯ ನಡುವೆಯೇ ಮಹಾರಾಷ್ಟ್ರದಲ್ಲಿ 10 ಸಾವಿರ ಕೋವಿಡ್ ಪ್ರಕರಣ

ವಾರ್ತಾ ಭಾರತಿ : 24 Jun, 2021

ಫೈಲ್ ಫೋಟೊ 

ಮುಂಬೈ : ದೇಶದ ಕೆಲ ರಾಜ್ಯಗಳಲ್ಲಿ ಕೊರೋನ ವೈರಸ್‌ನ ಡೆಲ್ಟಾ ಪ್ಲಸ್ ಪ್ರಬೇಧ ಹರಡುತ್ತಿರುವ ನಡುವೆಯೇ ಮಹಾರಾಷ್ಟ್ರದಲ್ಲಿ ಬುಧವಾರ ಒಂದೇ ದಿನ 10 ಸಾವಿರಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ವರದಿಯಾಗಿವೆ.

ಏಳು ದಿನಗಳ ಅಂತರದ ಬಳಿಕ ರಾಜ್ಯದಲ್ಲಿ 10,066 ಪ್ರಕರಣಗಳು ವರದಿಯಾಗಿದ್ದು, ಇದುವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 59,97,587ಕ್ಕೇರಿದೆ.

ಜೂನ್ 16ರಂದು ರಾಜ್ಯದಲ್ಲಿ 10,107 ಪ್ರಕರಣ ವರದಿಯಾದ ಬಳಿಕ ಇದುವರೆಗೂ ದೈನಿಕ ಪ್ರಕರಣಗಳ ಸಂಖ್ಯೆ 10 ಸಾವಿರಕ್ಕಿಂತ ಕಡಿಮೆ ಇತ್ತು. ರಾಜ್ಯದಲ್ಲಿ ಬುಧವಾರ 163 ಮಂದಿ ಮೃತಪಟ್ಟಿದ್ದು, 1,19,303 ಮಂದಿ ಇದುವರೆಗೆ ಸೋಂಕಿಗೆ ಬಲಿಯಾದದಂತಾಗಿದೆ. ಈ ಪೈಕಿ 109 ಸಾವು ಕಳೆದ 48 ಗಂಟೆಯಲ್ಲಿ ಸಂಭವಿಸಿದ್ದು, 54 ಹಿಂದಿನ ವಾರ ಸಂಭವಿಸಿದ ಸಾವುಗಳು ಎಂದು ಆರೋಗ್ಯ ಇಲಾಖೆ ಹೇಳಿದೆ.

ರಾಜ್ಯದ ಕೋವಿಡ್ ಗುಣಮುಖರಾದವರ ದರ 95.93ರಷ್ಟಿದ್ದು, ಸಾವಿನ ದರ ಶೇಕಡ 1.99 ಆಗಿದೆ. ರಾಜ್ಯದಲ್ಲಿ ಇನ್ನೂ 1.22 ಲಕ್ಷ ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ 5,92,108 ಮಂದಿ ಹೋಂ ಕ್ವಾರಂಟೈನ್ ಮತ್ತು 4223 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)