varthabharthi


ಕ್ರೀಡೆ

ಅತ್ಯಧಿಕ ಗೋಲಿನ ವಿಶ್ವದಾಖಲೆ ಸರಿಗಟ್ಟಿದ ರೊನಾಲ್ಡೊ

ವಾರ್ತಾ ಭಾರತಿ : 24 Jun, 2021

ಫೋಟೊ : PTI

ಬುಡಾಪೆಸ್ಟ್ : ಪುರುಷರ ಫುಟ್‌ಬಾಲ್‌ನಲ್ಲಿ ಅತಿಹೆಚ್ಚು ಅಂತರ್ ರಾಷ್ಟ್ರೀಯ ಗೋಲುಗಳನ್ನು ಗಳಿಸಿದ ದಾಖಲೆಯನ್ನು ಫುಟ್‌ಬಾಲ್ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೊ ಬುಧವಾರ ಸರಿಗಟ್ಟಿದರು.

ಬುಡಾಪೆಸ್ಟ್‌ನಲ್ಲಿ ನಡೆದ ಯೂರೊ-2020 ಫುಟ್‌ಬಾಲ್ ಟೂರ್ನಿಯ ಎಫ್ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್ ತಂಡದ ಜತೆ 2-2 ಡ್ರಾ ಸಾಧಿಸುವ ಮೂಲಕ ಫೋರ್ಚ್‌ಗಲ್ ಅಂತಿಮ 16ರ ಘಟ್ಟಕ್ಕೆ ಮುನ್ನಡೆಯಲು ರೊನಾಲ್ಡೊ ನೆರವಾದರು.

ಇದುವರೆಗೆ 109 ಅಂತರ್ ರಾಷ್ಟ್ರೀಯ ಗೋಲುಗಳನ್ನು ಗಳಿಸಿದ ವಿಶ್ವದಾಖಲೆ ಅಲಿ ಡೇರಿ ಹೆಸರಿನಲ್ಲಿತ್ತು. ರೊನಾಲ್ಡೊ ಅವರ ಈ ಅದ್ಭುತ ಗೋಲಿನಿಂದಾಗಿ ರೋಮಾಂಚಕ ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ಹಾಲಿ ಚಾಂಪಿಯನ್ ಪೋರ್ಚ್‌ಗಲ್ ಕಣದಲ್ಲಿ ಉಳಿಯಿತು.

ರೆಫರಿ ಆಂಟೋನಿಯೊ ಮಾಟೆವ್ ಲಹೋರ್ ಮತ್ತೊಂದು ಪೆನಾಲ್ಟಿ ನೀಡುವ ಮುನ್ನ ರೊನಾಲ್ಡೊ ಅವರ ರಿಯಲ್ ಮ್ಯಾಡ್ರಿಡ್ ಸಹ ಆಟಗಾರ ಕರೀಂ ಬೆನ್ಸೆಮಾ, ಪೋರ್ಚ್‌ಗಲ್ ತಂಡವನ್ನು ಬಹುತೇಕ ಟೂರ್ನಿಯಿಂದ ಹೊರಗಟ್ಟಿದ್ದರು.

ಎಫ್ ಗುಂಪಿನ ಮತ್ತೊಂದು ಪಂದ್ಯದಲ್ಲಿ ಜರ್ಮನಿ ಹಂಗೇರಿ ವಿರುದ್ಧ ಡ್ರಾ ಸಾಧಿಸಲು ಮಾತ್ರ ಸಾಧ್ಯವಾಯಿತು. ಆದ್ದರಿಂದ ಫ್ರಾನ್ಸ್ 5 ಅಂಕಗಳೊಂದಿಗೆ ’ಗ್ರೂಪ್ ಆಫ್ ಡೆತ್’ನಲ್ಲಿ ಅಗ್ರಸ್ಥಾನಿಯಾಯಿತು. ನಾಕೌಟ್ ಪಂದ್ಯದಲ್ಲಿ ವಿಶ್ವಚಾಂಪಿಯನ್ನರು ಸ್ವಿಝರ್‌ಲೆಂಡ್ ಸವಾಲು ಎದುರಿಸಲಿದ್ದಾರೆ. ಪೋರ್ಚ್‌ಗಲ್ ಬೆಲ್ಜಿಯಂ ವಿರುದ್ಧ ಸೆಣಸಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)