varthabharthi


ಮಾಹಿತಿ - ಮಾರ್ಗದರ್ಶನ

ಎಂಸ್ಸಿ ಅರ್ಥಶಾಸ್ತ್ರ ಕೋರ್ಸ್‍ಗೆ ಅರ್ಜಿ ಆಹ್ವಾನ

ವಾರ್ತಾ ಭಾರತಿ : 16 Jul, 2021

ಬೆಂಗಳೂರು, ಜು.16: ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯವು ಐದು ವರ್ಷಗಳ ಎಂಎಸ್ಸಿ ಅರ್ಥಶಾಸ್ತ್ರ(ಇಂಟಿಗ್ರೇಟೆಡ್)  ಕೋರ್ಸ್ ಹಾಗೂ ಎರಡು ವರ್ಷಗಳ ಎಂಎಸ್ಸಿ ಅರ್ಥಶಾಸ್ತ್ರ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನಿಸಿದೆ. 

ಐದು ವರ್ಷಗಳ ಸಂಯೋಜಿತ ಎಂಎಸ್ಸಿ ಅರ್ಥಶಾಸ್ತ್ರ(ಇಂಟಿಗ್ರೇಟೆಡ್) ಕೋರ್ಸ್‍ಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಇಂಗ್ಲಿಷ್‍ನ್ನು ಒಂದು ವಿಷಯವಾಗಿಸಿಕೊಂಡು ಹಾಗೂ ಗಣಿತವನ್ನು ಕೋರ್ ವಿಷಯವಾಗಿಸಿಕೊಂಡು ದ್ವಿತೀಯ ಪಿಯುಸಿ ಹಾಗೂ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಟ ಶೇ.65(ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಶೇ.60) ಅಂಕಗಳನ್ನು ಪಡೆದಿರಬೇಕು. 

ಎರಡು ವರ್ಷಗಳ ಎಂಎಸ್ಸಿ ಅರ್ಥಶಾಸ್ತ್ರ ಕೋರ್ಸ್‍ಗಾಗಿ ಅರ್ಜಿ ಸಲ್ಲಿಸುವವರು ಅರ್ಥಶಾಸ್ತ್ರ ವಿಷಯದಲ್ಲಿ ಬಿಎಸ್ಸಿ, ಬಿಎನಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರ, ಅರ್ಥಶಾಸ್ತ್ರ ವಿಷಯವನ್ನು ಪ್ರಧಾನ ವಿಷಯಗಳನ್ನಾಗಿಸಿಕೊಂಡು ಕನಿಷ್ಟ ಶೇ.55(ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಶೇ.50)ಅಂಕಗಳನ್ನು ಪಡೆದಿರಬೇಕು.

ಆನ್‍ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಆ.8 ಆಗಿದೆ. ಆನ್‍ಲೈನ್ ಪ್ರವೇಶ ಪರೀಕ್ಷೆಯು ಆ.25ರಂದು ನಡೆಯಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ, ವಿಜ್ಞಾನ ಭಾರತಿ ಮುಖ್ಯರಸ್ತೆ, ನಾಗರಭಾವಿ(ಪೊ), ಬೆಂ.72, ದೂ.080-29557767, 73493-33323ಕ್ಕೆ ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)