varthabharthi


ಕರಾವಳಿ

ಅಲೋಶಿಯಸ್ ಕಾಲೇಜಿನ ಆಕಾಂಕ್ಷಾ ಶೆಣೈಗೆ ಬೆಸ್ಟ್ ಕೆಡೆಟ್ ಅವಾರ್ಡ್‌

ವಾರ್ತಾ ಭಾರತಿ : 20 Jul, 2021

ಮಂಗಳೂರು, ಜು.20: ನಗರದ ಸಂತ ಅಲೋಸಿಯೇಶ್ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಹಾಗೂ ಎನ್‌ಸಿಸಿ ಆರ್ಮಿ ವಿಂಗ್-18 ಕರ್ನಾಟಕ ಬೆಟಾಲಿಯನ್ ಇದರ ಕೆಡೆಟ್ ಸಿಪಿಎಲ್ ಆಕಾಂಕ್ಷಾ ಶೆಣೈ ಕೆಡೆಟ್ ವೆಲ್ಫೇರ್ ಸೊಸೈಟಿಯ ರಾಜ್ಯ ಮಟ್ಟದ ಬೆಸ್ಟ್ ಎನ್‌ಸಿಸಿ ಕೆಡೆಟ್ ಅವಾರ್ಡ್ ಪಡೆದಿದ್ದಾರೆ.

ಆಕಾಂಕ್ಷಾ ಕೆಡೆಟ್ ವೆಲ್ಫೇರ್‌ ಸೊಸೈಟಿ ನಡೆಸಿದ ಬೆಸ್ಟ್ ಕೆಡೆಟ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಹಾಗೂ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದರು. ಡ್ರಿಲ್ ಟೆಸ್ಟ್, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲೂ ಭಾಗವಹಿಸಿ ಗೆದ್ದಿದ್ದರು. ಆಕಾಂಕ್ಷಾರಿಗೆ ಕಾಲೇಜಿನ ಆರ್ಮಿ ವಿಂಗ್‌ನ ಅಧಿಕಾರಿ ಕಾ.ಶಕಿನ್ ರಾಜ್ ಮಾರ್ಗದರ್ಶನ ನೀಡಿದ್ದರು ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)