varthabharthi


ರಾಷ್ಟ್ರೀಯ

ಸಾವಿರ ಕೆ.ಜಿ. ಮೀನು, 10 ಆಡುಗಳನ್ನು ನವ ವಿವಾಹಿತೆ ಪುತ್ರಿಗೆ ಉಡುಗೊರೆ ನೀಡಿದ ತಂದೆ

ವಾರ್ತಾ ಭಾರತಿ : 20 Jul, 2021

ಪುದುಚೇರಿ:  ನವವಿವಾಹಿತೆಯೊಬ್ಬರು  ತೆಲುಗು ಸಂಪ್ರದಾಯದಂತೆ  ಪವಿತ್ರ ತಿಂಗಳಾಗಿರುವ ಆಷಾಢ  ಮಾಸದ ಸಮಯದಲ್ಲಿ ತನ್ನ  ತಂದೆಯಿಂದ ಉಡುಗೊರೆಯಾಗಿ ಅಪಾರ ಪ್ರಮಾಣದ ಮೀನು, ತರಕಾರಿಗಳು, ಉಪ್ಪಿನಕಾಯಿ ಮತ್ತು ಸಿಹಿತಿಂಡಿಗಳನ್ನು ಸ್ವೀಕರಿಸಿದರು ಎಂದು India today ವರದಿ ಮಾಡಿದೆ.

 ನವವಿವಾಹಿತರಿಗೆ ಇದು ಮಹತ್ವದ ತಿಂಗಳು. ಸಂಪ್ರದಾಯದ ಪ್ರಕಾರ, ಹೊಸ ವಧು ಈ ಸಮಯದಲ್ಲಿ ತನ್ನ ಹೆತ್ತವರಿಂದ ಉಡುಗೊರೆಗಳನ್ನು ಪಡೆಯುತ್ತಾರೆ.

ಆಂಧ್ರಪ್ರದೇಶದಲ್ಲಿ ಹೊಸದಾಗಿ ಮದುವೆಯಾದ ಮಗಳಿಗೆ ತಂದೆ ಕೊಟ್ಟಿರುವ ಉಡುಗೊರೆ ಪಟ್ಟಣದಲ್ಲಿ  ಚರ್ಚೆಯ ವಿಚಾರವಾಗಿದೆ. ರಾಜಮಂಡ್ರಿಯ ಪ್ರಮುಖ ಉದ್ಯಮಿ ಬಟುಲಾ ಬಲರಾಮ ಕೃಷ್ಣ ಅವರು 1,000 ಕೆ.ಜಿ. ಮೀನು, 1,000 ಕೆ.ಜಿ. ತರಕಾರಿಗಳು, 250 ಕೆ.ಜಿ. ಸೀಗಡಿಗಳು, 250 ಕೆ.ಜಿ. ಕಿರಾಣಿ ವಸ್ತುಗಳು, 250 ಜಾರ್ ಉಪ್ಪಿನಕಾಯಿ, 250 ಕೆ.ಜಿ. ಸಿಹಿತಿಂಡಿಗಳು, 50 ಕೋಳಿ, 10 ಆಡುಗಳನ್ನು ಪುದುಚೇರಿಯ ಯಾನಂನಲ್ಲಿರುವ ತಮ್ಮ ಮಗಳ ನಿವಾಸಕ್ಕೆ ಕಳುಹಿಸಿದ್ದಾರೆ. 

ಯಾನಂನ ಪ್ರಮುಖ ಉದ್ಯಮಿಯೊಬ್ಬರ ಪುತ್ರ ಪವನ್ ಕುಮಾರ್ ಇತ್ತೀಚೆಗೆ ಬಟುಲಾ ಬಲರಾಮ ಕೃಷ್ಣ ಅವರ ಪುತ್ರಿ ಪ್ರತ್ಯೂಷಾ ಅವರನ್ನು ವಿವಾಹವಾದರು. ದಂಪತಿಗಳು ತಮ್ಮ ಮೊದಲ ಆಷಾಢ ಮಾಸವನ್ನು ಆಚರಿಸುತ್ತಿದ್ದಾರೆ. ಆದ್ದರಿಂದ, ಪ್ರತ್ಯೂಷಾ ಅವರ ತಂದೆ ತನ್ನ ಮಗಳಿಗೆ ಹೆಚ್ಚುವರಿ ವಿಶೇಷ ವಸ್ತುಗಳನ್ನು ಗಿಫ್ಟ್  ನೀಡಲು ನಿರ್ಧರಿಸಿದರು. ಉಡುಗೊರೆಗಳಿಂದ ತುಂಬಿದ ಟ್ರಕ್  ಗಂಡನ ಮನೆಗೆ ಬಂದಾಗ ಪ್ರತ್ಯೂಷಾ ಕೂಡ ಅಚ್ಚರಿಪಟ್ಟರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)