varthabharthi


ಕ್ರೀಡೆ

ತಾನು ಬ್ರಾಹ್ಮಣನಾಗಿರುವುದರಿಂದ ಚೆನ್ನೈ ಸಂಸ್ಕೃತಿ ಅಳವಡಿಸಿಕೊಂಡಿದ್ದೇನೆ ಎಂದ ಸುರೇಶ್ ರೈನಾ

ವಾರ್ತಾ ಭಾರತಿ : 20 Jul, 2021

ಚೆನ್ನೈ: ತಾನೊಬ್ಬ ಬ್ರಾಹ್ಮಣನಾಗಿರುವ ಕಾರಣ ಚೆನ್ನೈನಲ್ಲಿನ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದೇನೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ಹೇಳಿಕೊಂಡಿದ್ದಾರೆ. ಅವರ ಅನಿಸಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಮಿಳುನಾಡು ಪ್ರೀಮಿಯರ್ ಲೀಗ್‌ನ (ಟಿಎನ್‌ಪಿಎಲ್) ಐದನೇ ಋತುವಿನ ಆರಂಭಿಕ ಪಂದ್ಯದ ಸಂದರ್ಭದಲ್ಲಿ ವೀಕ್ಷಕವಿವರಣೆಗೆ ಸೇರಲು ಅವರನ್ನು ಆಹ್ವಾನಿಸಿದಾಗ ಉತ್ತರ ಪ್ರದೇಶ ಮೂಲದ ರೈನಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಿಎನ್‌ಪಿಎಲ್ ಋತುವಿನ ಮೊದಲ ಪಂದ್ಯವನ್ನು ಸೋಮವಾರ ಲೈಕಾ ಕೋವಾಯ್ ಕಿಂಗ್ಸ್ ಮತ್ತು ಸೇಲಂ ಸ್ಪಾರ್ಟನ್ಸ್  ನಡುವೆ ಆಡಲಾಯಿತು. ಪಂದ್ಯದ ಸಮಯದಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಭಾಗವಾಗಿರುವ ರೈನಾ ಅವರನ್ನು ವೀಕ್ಷಕವಿವರಣೆಗಾರರು, ತಾವು   ದಕ್ಷಿಣ ಭಾರತದ ಸಂಸ್ಕೃತಿಯನ್ನು ಹೇಗೆ ಸ್ವೀಕರಿಸಿದ್ದೀರಿ ಎಂದು ಕೇಳಿದರು.

ಇದಕ್ಕೆ ಉತ್ತರವಾಗಿ, ರೈನಾ, “ನಾನು ಬ್ರಾಹ್ಮಣನಾಗಿದ್ದೇನೆ . ನಾನು ಚೆನ್ನೈನಲ್ಲಿ 2004 ರಿಂದ ಆಡುತ್ತಿದ್ದೇನೆ, ನಾನು ಸಂಸ್ಕೃತಿಯನ್ನು ಪ್ರೀತಿಸುತ್ತೇನೆ ... ನನ್ನ ತಂಡದ ಆಟಗಾರರನ್ನು ನಾನು ಪ್ರೀತಿಸುತ್ತೇನೆ. ನಾನು ಅನಿರುದ್ಧ ಶ್ರೀಕಾಂತ್, ಬದ್ರಿ (ಸುಬ್ರಮಣ್ಯಂ ಬದ್ರಿನಾಥ್), ಬಾಲಾ ಭಾಯ್ (ಎಲ್ .ಬಾಲಾಜಿ) ಅವರೊಂದಿಗೆ ಆಡಿದ್ದೇನೆ… ಅಲ್ಲಿಂದ ನೀವು ಏನಾದರೂ ಒಳ್ಳೆಯದನ್ನು ಕಲಿಯಬೇಕು ಎಂದು ನಾನು ಭಾವಿಸುತ್ತೇನೆ. ನಾನು ಅಲ್ಲಿನ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ಸಿಎಸ್‌ಕೆ ಭಾಗವಾಗಿರುವ ಅದೃಷ್ಟಶಾಲಿ. ನಾವು ಅಲ್ಲಿ ಇನ್ನೂ ಹೆಚ್ಚಿನ ಪಂದ್ಯಗಳನ್ನು ಆಡುತ್ತೇವೆ ಎಂಬ ಆಶಾವಾದದಲ್ಲಿದ್ದೇನೆ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)