varthabharthi


ರಾಷ್ಟ್ರೀಯ

"ಇದು ಸರಕಾರವೇ, ಅಥವಾ ಹಳೇ ಹಿಂದಿ ಸಿನೆಮಾಗಳಲ್ಲಿದ್ದ ಬಡ್ಡಿ ವ್ಯಾಪಾರಿಯೇ?': ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ

ವಾರ್ತಾ ಭಾರತಿ : 20 Jul, 2021

ಹೊಸದಿಲ್ಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಲಾಗುತ್ತಿರುವ ತೆರಿಗೆ ಕುರಿತಂತೆ ಇಂದು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ "ಇದು ಸರಕಾರವೇ ಅಥವಾ ಹಳೇ ಹಿಂದಿ ಸಿನೆಮಾಗಳ ದುರಾಸೆಯ ಬಡ್ಡಿ ವ್ಯಾಪಾರಿಯೇ?" ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಸಂಗ್ರಹದಿಂದ ಕಳೆದ ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯ ಶೇ88ರಷ್ಟು ಏರಿಕೆ ಕಂಡು ರೂ 3.35 ಲಕ್ಷ ಕೋಟಿಗೆ ತಲುಪಿದೆ ಎಂದು ಸೋಮವಾರ ಲೋಕಸಭೆಗೆ ಸರಕಾರ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ರಾಹುಲ್ ಅವರ ವಾಗ್ದಾಳಿ ನಡೆದಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ಜತೆಗೆ ಒಂದು ಮಾಧ್ಯಮ ವರದಿಯನ್ನೂ ಟ್ಯಾಗ್ ಮಾಡಿದ್ದಾರೆ. "ಒಂದು ಕಡೆ ಅವರು ಸಾಲ ಪಡೆಯಲು ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ, ಇನ್ನೊಂದೆಡೆ ಅವರು  ತೆರಿಗೆ ವಸೂಲಿಯಿಂದ  ಬೇಕಾಬಿಟ್ಟಿ ಗಳಿಸುತ್ತಿದ್ದಾರೆ. ಇದು ಸರಕಾರವೇ ಅಥವಾ ಹಳೇ ಹಿಂದಿ ಸಿನೆಮಾಗಳಲ್ಲಿ ಕಾಣಿಸುವ ದುರಾಸೆಯ ಬಡ್ಡಿ ವ್ಯಾಪಾರಿಯೇ?" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್, ಜತೆಗೆ TaxExtortion ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)