ಏಶ್ಯಾ ಸಮುದ್ರದಲ್ಲಿ 2 ಯುದ್ಧ ನೌಕೆ ಶಾಶ್ವತ ನಿಯೋಜನೆಗೆ ಬ್ರಿಟನ್ ನಿರ್ಧಾರ
ಟೋಕ್ಯೊ, ಜು.20: ಏಶ್ಯಾ ಸಮುದ್ರದಲ್ಲಿ 2 ಯುದ್ಧನೌಕೆಗಳನ್ನು ಶಾಶ್ವತವಾಗಿ ನಿಯೋಜಿಸಲಾಗುವುದು ಎಂದು ಬ್ರಿಟನ್ ಮಂಗಳವಾರ ಹೇಳಿದೆ. ಚೀನಾವು ಏಶ್ಯಾ ಸಮುದ್ರ ವ್ಯಾಪ್ತಿಯಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಈ ಉಪಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.
ಜಪಾನ್ಗೆ ಭೇಟಿ ನೀಡಿದ ಬ್ರಿಟನ್ನ ರಕ್ಷಣಾ ಸಚಿವ ಬೆನ್ ವ್ಯಾಲೇಸ್ ಹಾಗೂ ಜಪಾನ್ನ ರಕ್ಷಣಾ ಸಚಿವ ನೊಬುವೊ ಕಿಶಿ ಜಂಟಿ ಹೇಳಿಕೆಯಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಸೆಪ್ಟಂಬರ್ನಲ್ಲಿ ಬ್ರಿಟನ್ನ ಕ್ವೀನ್ ಎಲಿಝಬೆತ್ ಯುದ್ಧವಿಮಾನ ವಾಹಕ ನೌಕೆ ಹಾಗೂ ಅದರ ಬೆಂಗಾವಲಿನ ಹಡಗುಗಳು ದಕ್ಷಿಣ ಚೀನಾ ಸಮುದ್ರದ ಮೂಲಕ ಜಪಾನ್ಗೆ ತೆರಳಿದ್ದವು. ಈ ನೌಕೆಗಳನ್ನು ಅಮೆರಿಕ ಮತ್ತು ಜಪಾನ್ ನೌಕಾ ನೆಲೆಯಲ್ಲಿ ಇರಿಸಲಾಗುವುದು ಎಂದು ಜಪಾನ್ ಹೇಳಿತ್ತು.
ಅಮೆರಿಕವು ದೇಶದ ಹೊರಭಾಗದಲ್ಲಿ ಹೊಂದಿರುವ ಅತ್ಯಂತ ಬೃಹತ್ ಸೇನಾ ನೆಲೆ ಜಪಾನ್ನಲ್ಲಿದೆ. ಇಲ್ಲಿ ಅಮೆರಿಕದ ಹಡಗುಗಳು, ಯುದ್ಧವಿಮಾನ, ನೂರಾರು ಸಬ್ಮೆರೀನ್ಗಳಿವೆ.
Next Story