varthabharthi


ಕರಾವಳಿ

ಕಾರ್ಕಳ: ಮಲಬಾರ್ ಗೋಲ್ಡ್ ವತಿಯಿಂದ ರೇಷನ್ ಕಿಟ್ ವಿತರಣೆ

ವಾರ್ತಾ ಭಾರತಿ : 21 Jul, 2021

ಕಾರ್ಕಳ ಜು. 21 ಮಲಬಾರ್ ಗೋಲ್ಡ್ ವತಿಯಿಂದ ಕಾರ್ಕಳದ ಶಾಸಕರ ಭವನದಲ್ಲಿ ತಾಲೂಕಿನ ಅರ್ಹ ಬಡ ವರ್ಗದವರಿಗೆ ರೇಷನ್ ಕಿಟ್ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿತರಿಸಿದರು.

ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ನ ಮ್ಯಾನೇಜರ್ ರಾಘವೇಂದ್ರ ನಾಯಕ್ ಅಜೆಕಾರ್ ಅವರು ಬಡ ಜನತೆಗೆ ಇರುವ ಮಲಬಾರ್ ಗೋಲ್ಡ್ ನ ಸಾಮಾಜಿಕ ಸೌಲಭ್ಯಗಳ ಬಗ್ಗೆ ವಿವರಣೆ ಗಳನ್ನು ನೀಡಿದರು.

ಕಾರ್ಕಳ ನಗರ ಬಿಜೆಪಿ ಅಧ್ಯಕ್ಷ ಮಹಾವೀರ್ ಜೈನ್, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯೆ ಮಾಲಿನಿ ಜೆ ಶೆಟ್ಟಿ, ಪಾಧ್ಯಕ್ಷರು ಹರೀಶ್ ನಾಯಕ್, ಮಲಬಾರ್ ಗೋಲ್ಡನ್  ನಿತ್ಯಾನಂದ ನಾಯಕ್, ಉಮೇಶ್ ರಾವ್ ಉಪಸ್ಥಿತರಿದ್ದರು. ಕೋಟ್ಯನ್ ಸಾಣೂರು ಕಾರ್ಯಕ್ರಮ ನಿರೂಪಿಸಿದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)