varthabharthi


ನಿಮ್ಮ ಅಂಕಣ

ಕಂದಾಯ ಇಲಾಖೆಯ ಮುಂದಿದೆ ಸವಾಲು!

ವಾರ್ತಾ ಭಾರತಿ : 22 Jul, 2021
ಲಕ್ಷ್ಮೀಕಾಂತರಾಜು ಎಂ. ಜಿ., ಗುಬ್ಬಿ

ಮಾನ್ಯರೇ,

ಗ್ರಾಮಲೆಕ್ಕಿಗರನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳಬೇಕೆಂದು ಸರಕಾರಕ್ಕೆ ಸುಮಾರು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದರೂ ಇದುವರೆಗೆ ಸರಕಾರ ಕಿವಿಗೆ ಹಾಕಿಕೊಳ್ಳಲಿಲ್ಲ.
ಈ ಸಲದ ಪಿಯು ಫಲಿತಾಂಶದಲ್ಲಿ 2,239 ವಿದ್ಯಾರ್ಥಿಗಳು 600/600 ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ಫಲಿತಾಂಶ ಪರೀಕ್ಷೆಯ ಮೂಲಕ ಬರುವುದು ಸಾಧ್ಯವಿರಲಿಲ್ಲ. ಈಗ ಕಂದಾಯ ಇಲಾಖೆ ಗ್ರಾಮಲೆಕ್ಕಿಗರ ಹುದ್ದೆಗೆ ಅರ್ಜಿ ಕರೆದರೆ ಇವರೂ ಅರ್ಜಿ ಹಾಕಲು ಅರ್ಹರು.
 ಇಂತಹ ಸಮಯದಲ್ಲೂ ಒಂದು ವೇಳೆ ಪರೀಕ್ಷೆ ಮೂಲಕ ನೇಮಕ ಮಾಡಲಿಲ್ಲ ಅಂದರೆ 2,239 ಅಭ್ಯರ್ಥಿಗಳು ಆಯ್ಕೆಯಾಗುವವರೆಗೆ ಬೇರೆಯವರು ಆಯ್ಕೆಯಾಗುವುದಿಲ್ಲ. ರಾಜ್ಯವ್ಯಾಪಿ ಎಲ್ಲ ಜಿಲ್ಲೆಗಳಲ್ಲಿ ಹುದ್ದೆಗಳಿಗೆ ಈ ಮೇಲಿನ ಔಟ್ ಆಫ್ ಔಟ್ ಅಭ್ಯರ್ಥಿಗಳಿರುವಷ್ಟು ಅರ್ಜಿ ಕರೆಯುವುದಿಲ್ಲ.
ಹಾಗಾಗಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕೆಂದರೆ ಪಿಯು ಪರೀಕ್ಷೆಯನ್ನು ಅರ್ಹತಾ ಪರೀಕ್ಷೆಯನ್ನಾಗಿಸಿ ಸಿಇಟಿ ಪರೀಕ್ಷೆ ನಡೆಸಿ ಅಲ್ಲಿ ಗಳಿಸುವ ಅಂಕಗಳ ಆಧಾರದ ಮೇರೆಗೆ ನೇಮಕ ಮಾಡುವ ಅನಿವಾರ್ಯ ಕಂದಾಯ ಇಲಾಖೆಗೆ ಬಂದೊದಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)