varthabharthi


ರಾಷ್ಟ್ರೀಯ

ಜುಲೈ 24: ಸಿ.ಐ.ಎಸ್.ಸಿ.ಇಯ 10, 12ನೇ ತರಗತಿ ಫಲಿತಾಂಶ ಪ್ರಕಟ

ವಾರ್ತಾ ಭಾರತಿ : 23 Jul, 2021

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜು. 23: ಸಿ.ಐ.ಎಸ್.ಸಿ.ಇ 10 ಹಾಗೂ 12ನೇ ತರಗತಿ ಪರೀಕ್ಷೆ ಫಲಿತಾಂಶವನ್ನು ಜುಲೈ 24ರಂದು ಪ್ರಕಟಿಸಲಿದೆ ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯದರ್ಶಿ ಗೆರ್ರಿ ಅರಾಥೂನ್ ಶುಕ್ರವಾರ ತಿಳಿಸಿದ್ದಾರೆ. ‘‘10ನೇ ತರಗತಿ (ಐಸಿಎಸ್ಇ) ಹಾಗೂ 12ನೇ ತರಗತಿ (ಐಎಸ್ಸಿ) ಪರೀಕ್ಷೆಯ ಫಲಿತಾಂಶವನ್ನು ಜುಲೈ 24ರಂದು ಅಪರಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು. 

ಫಲಿತಾಂಶ ಮಂಡಳಿಯ ವೆಬ್ಸೈಟ್ ಹಾಗೂ ಎಸ್ಎಂಎಸ್ ಮೂಲಕ ಲಭ್ಯವಾಗಲಿವೆ’’ ಎಂದು ಆರಾಥೂನ್ ತಿಳಿಸಿದ್ದಾರೆ. ಶಾಲೆಗಳಿಗೆ ಮರು ಎಣಿಕೆ ನೋಂದಣಿ ಸೌಲಭ್ಯ CAREERS ಪೋರ್ಟಲ್ ಮೂಲಕ ಲಭ್ಯವಾಗಲಿದೆ. ಪ್ರಾಂಶುಪಾಲರ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ಬಳಸಿ ಮಂಡಳಿಯ CAREERS ಪೋರ್ಟಲ್ಗೆ ಲಾಗಿನ್ ಆಗಿ ಶಾಲೆಗಳು ಫಲಿತಾಂಶ ಪಡೆಯಬಹುದು. ‌

ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಈ ವರ್ಷ ಎರಡೂ ತರಗತಿಗಳ ಪರೀಕ್ಷೆಯನ್ನು ಸಿಐಎಸ್ಸಿಇ (ಭಾರತೀಯ ಶಾಲಾ ಪ್ರಮಾಣ ಪತ್ರ ಪರೀಕ್ಷೆಗಳ ಮಂಡಳಿ) ರದ್ದುಗೊಳಿಸಿತ್ತು. ಮಂಡಳಿ ನಿರ್ಧರಿಸಿದ ಪರ್ಯಾಯ ವೌಲ್ಯಮಾಪನದ ನೀತಿಯ ಆಧಾರದಲ್ಲಿ ಈ ಫಲಿತಾಂಶ ಘೋಷಣೆಯಾಗಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)