ಒಲಿಂಪಿಕ್ಸ್: ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ ವಿಶ್ವದ ನಂ.1 ಟೆನಿಸ್ ಸ್ಟಾರ್ ಬಾರ್ಟಿ
Photo: twitter/WilliamYang120
ಟೋಕಿಯೊ: ವಿಶ್ವದ ನಂ.1 ಟೆನಿಸ್ ತಾರೆ ಅಶ್ಲೆ ಬಾರ್ಟಿ ಅವರು ಒಲಿಂಪಿಕ್ಸ್ ಟೆನಿಸ್ ಟೂರ್ನಮೆಂಟ್ ನ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದರು.
ರವಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಆಟಗಾರ್ತಿಯು ಸ್ಪೇನ್ ಆಟಗಾರ್ತಿ ಸಾರಾ ಸೊರ್ಬಿಸ್ ವಿರುದ್ಧ 4-6, 3-6 ಸೆಟ್ ಗಳ ಅಂತರದಿಂದ ಸೋತಿದ್ದಾರೆ.
ಹಾಲಿ ವಿಂಬಲ್ಡನ್ ಚಾಂಪಿಯನ್ ಬಾರ್ಟಿ ಪ್ರತಿ ಸೆಟ್ ನಲ್ಲಿ ಎರಡು ಬಾರಿ ಸರ್ವ್ ಕೈಚೆಲ್ಲಿದರು. 48ನೇ ರ್ಯಾಂಕಿನ ಸೊರ್ಬಿಸ್ ಕೇವಲ 5 ಬಾರಿ ಅನಗತ್ಯ ತಪ್ಪೆಸಗಿ ಆಸ್ಟ್ರೇಲಿಯದ ಆಟಗಾರ್ತಿಗೆ ಶಾಕ್ ನೀಡಿದರು.
Next Story