ಒಲಿಂಪಿಕ್ಸ್ ಟೇಬಲ್ ಟೆನಿಸ್: ಮಣಿಕಾ ಬಾತ್ರಾಗೆ ಗೆಲುವು
Photo: AP/PTI
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ರವಿವಾರ ಟೇಬಲ್ ಟೆನಿಸ್ ಮಹಿಳಾ ಸಿಂಗಲ್ಸ್ ವಿಭಾಗದ 2ನೇ ಸುತ್ತಿನಲ್ಲಿ ಭಾರತದ ಆಟಗಾರ್ತಿ ಮಣಿಕಾ ಬಾತ್ರಾ 4-11, 4-11, 11-7, 12-10, 8-11, 11-5, 11-7 ಅಂತರದಿಂದ ಉಕ್ರೇನ್ನ ಮಾರ್ಗರಿಟಾ ಪೆಸೊಟ್ಕಾ ಅವರನ್ನು ಸೋಲಿಸಿದರು.
0-2 ಹಿನ್ನಡೆಯಿಂದ ಚೇತರಿಸಿಕೊಂಡ ಬಾತ್ರಾ 57 ನಿಮಿಷಗಳಲ್ಲಿ ಸ್ಪರ್ಧೆಯನ್ನು 4-3 ಅಂತರದಿಂದ ಗೆದ್ದುಕೊಂಡರು. ಬಾತ್ರಾ ಮೂರನೇ ಸುತ್ತಿಗೆ ತೇರ್ಗಡೆಯಾದರು.
Next Story