ಒಲಿಂಪಿಕ್ಸ್ ಬಾಕ್ಸಿಂಗ್: ಮೇರಿಕೋಮ್ ಗೆಲುವಿನ ಆರಂಭ, ಅಂತಿಮ-16ರ ಸುತ್ತಿಗೆ ತೇರ್ಗಡೆ
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಬಾಕ್ಸಿಂಗ್ ನ ಫ್ಲೈವೇಟ್ (48-51 ಕೆಜಿ)ವಿಭಾಗದ 32 ನೇ ಸುತ್ತಿನಲ್ಲಿ ಭಾರತದ ಬಾಕ್ಸಿಂಗ್ ದಂತಕತೆ ಮೇರಿಕೋಮ್ ಡೊಮಿನಿಕನ್ ಗಣರಾಜ್ಯದ ಮಿಗುಯೆಲಿನಾ ಹೆರ್ನಾಂಡೆಜ್ ಗಾರ್ಸಿಯಾ ಅವರನ್ನು 4-1 ಅಂತರದಿಂದ ಸೋಲಿಸಿ ಗೆಲುವಿನ ಆರಂಭ ಪಡೆದರು. ಈ ಗೆಲುವಿನ ಮೂಲಕ ಮೇರಿಕೋಮ್ ಅವರು ಅಂತಿಮ-16ರ ಸುತ್ತಿಗೆ ತಲುಪಿದರು.
ಮೇರಿಕೋಮ್ ಅವರು ಮೊದಲೆರಡು ಸುತ್ತುಗಳನ್ನು ಸುಲಭವಾಗಿ ಗೆದ್ದುಕೊಂಡರು.
38ರ ಹರೆಯದ ಮಣಿಪುರದ ಬಾಕ್ಸರ್ ಮೇರಿಕೋಮ್ ಜುಲೈ 29ರಂದು ನಡೆಯಲಿರುವ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ 3ನೇ ಶ್ರೇಯಾಂಕದ ಕೊಲಂಬಿಯಾದ ಬಾಕ್ಸರ್ ವಲೆನ್ಸಿಯಾ ವಿಕ್ಟೋರಿಯಾ ಅವರನ್ನು ಎದುರಿಸಲಿದ್ದಾರೆ.
Next Story