ಕರಾವಳಿ
ಜು.28: ವಿದ್ಯುತ್ ವ್ಯತ್ಯಯ
ವಾರ್ತಾ ಭಾರತಿ : 27 Jul, 2021
ಮಂಗಳೂರು, ಜು.27: ಇದೇ ಜು.28ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
110/33/11 ಕೆವಿ ಕೊಣಾಜೆ ಉಪಕೇಂದ್ರದಿಂದ ಹೊರಡುವ 11 ಕೆವಿ ಕೊಣಾಜೆ, ಮಂಜನಾಡಿ, ಉಳ್ಳಾಲ ಎಕ್ಸ್‌ಪ್ರೆಸ್ ಮತ್ತು ಕಿನ್ಯಾ ಫೀಡರ್‌ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಪ್ರಯುಕ್ತ ನಾಟೆಕಲ್, ಉರುಮನೆ, ಮಂಗಳಾನಗರ, ಮಂಗಳಾಂತಿ, ಕಲ್ಕಟ, ಮೊಂಟೆಪದವು, ಕಿನ್ಯಾ, ದೇರಳಕಟ್ಟೆ, ರೆಂಜಾಡಿ, ನಿಟ್ಟೆ, ಬಗಂಬಿಲ, ಯೆನೆಪೊಯ, ಕಾನಕೆರೆ, ಕಕ್ಕೆಮಜಲ್, ಪನೀರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)










