varthabharthi


ಕರಾವಳಿ

ಕೊಡವೂರು: ವಿಡಿಯೋ ಎಡಿಟಿಂಗ್ ಕಾರ್ಯಾಗಾರ

ವಾರ್ತಾ ಭಾರತಿ : 3 Aug, 2021

ಉಡುಪಿ, ಆ.3: ದೃಶ್ಯಮಾಧ್ಯಮ ಕ್ಷೇತ್ರ ನಿಜಕ್ಕೂ ಕ್ರಿಯಾತ್ಮಕ ಮತ್ತು ವೈವಿದ್ಯಮಯವಾಗಿದೆ. ಆದುದರಿಂದ ನೂತನ ತಂತ್ರಜ್ಞಾನವನ್ನು ಕಾಲಕಾಲಕ್ಕೆ ನಾವು ಅಳವಡಿಸಿಕೊಂಡರೆ ನಮ್ಮ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಬಹುದು ಎಂದು ಹಿರಿಯ ಸಂಪನ್ಮೂಲ ವ್ಯಕ್ತಿ ಎಸ್.ಜಗದೀಸನ್ ಹೇಳಿದ್ದಾರೆ.

ಸೌತ್ ಕೆನರಾ ಫೋಟೋಗ್ರಾಫರ್ ಅಸೋಶಿಯೇಶನ್ ಉಡುಪಿ ವಲಯ ವತಿಯಿಂದ ಇತ್ತೀಚೆಗೆ ಕೊಡವೂರು ವಿಪ್ರಶ್ರೀ ಸಭಾಂಗಣದಲ್ಲಿ ಆಯೋಜಿಸ ಲಾದ ವಿಡಿಯೋ ಎಡಿಟಿಂಗ್ ಕಾರ್ಯಾಗಾರವನ್ನು ಉ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಷಿ ಯೇಶನ್ ಜಿಲ್ಲಾಧ್ಯಕ್ಷ ಕರಂದಾಡಿ ಶ್ರೀಧರ ಶೆಟ್ಟಿಗಾರ್ ಮಾತನಾಡಿದರು. ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕೋಶಾಧಿಕಾರಿ ಪ್ರಸಾದ್ ಜತ್ತನ್, ಪ್ರಸನ್ನ ಕೊಡವೂರು ಉಪಸ್ಥಿತರಿದ್ದರು. ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು ಸ್ವಾಗತಿಸಿದರು. ವಲಯ ಕಾರ್ಯದರ್ಶಿ ಸುಕೇಶ್ ಕೆ ಅಮೀನ್ ವಂದಿಸಿದರು. ರಾಘವನ್ದ್ರ ಶೇರಿಗಾರ್ ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)