varthabharthi


ರಾಷ್ಟ್ರೀಯ

ಕೇರಳ: ಒಂದೇ ದಿನ 23.6 ಸಾವಿರ ಕೋವಿಡ್ ಪ್ರಕರಣ

ವಾರ್ತಾ ಭಾರತಿ : 4 Aug, 2021

ಹೊಸದಿಲ್ಲಿ, ಆ.4: ಕೇರಳದಲ್ಲಿ ಮಂಗಳವಾರ ದೈನಿಕ ಕೋವಿಡ್ ಪ್ರಕರಣಗಳ ಸಂಖ್ಯೆ 23,500ರ ಗಡಿ ದಾಟಿದ್ದು, ಕಳೆದ ಎರಡು ತಿಂಗಳಲ್ಲಿ ದೇಶದ ಯಾವುದೇ ರಾಜ್ಯಗಳಲ್ಲಿ ದಿನವೊಂದರಲ್ಲಿ ದಾಖಲಾದ ಅತ್ಯಧಿಕ ಸಂಖ್ಯೆ ಇದಾಗಿದೆ. ಇದರಿಂದಾಗಿ ದೇಶದಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ 30 ಸಾವಿರಕ್ಕೆ ಇಳಿದ ಮರುದಿನವೇ ದಿಢೀರನೇ ಪ್ರಕರಣಗಳ ಸಂಖ್ಯೆ 42 ಸಾವಿರಕ್ಕೇರಿದೆ.

ಕೇರಳದಲ್ಲಿ ಮಂಗಳವಾರ 23,676 ಪ್ರಕರಣಗಳು ವರದಿಯಾಗಿದ್ದು, ಜೂನ್ 3ರಂದು ತಮಿಳುನಾಡಿನಲ್ಲಿ 24,405 ಪ್ರಕರಣಗಳು ವರದಿಯಾದ ಬಳಿಕ ದೇಶದ ಯಾವುದೇ ರಾಜ್ಯದಲ್ಲಿ ದಾಖಲಾದ ಅತ್ಯಧಿಕ ಸಂಖ್ಯೆ ಇದಾಗಿದೆ.

ಕೇರಳದಲ್ಲಿ ಪ್ರಕರಣಗಳ ಭಾರಿ ಏರಿಕೆಯಿಂದಾಗಿ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 42,497ಕ್ಕೇರಿರುವುದು ರಾಜ್ಯ ಸರ್ಕಾರಗಳ ಅಂಕಿಅಂಶಗಳಿಂದ ತಿಳಿದುಬಂದಿದೆ. ಆದರೆ ಇದು ಕಳೆದ ಮಂಗಳವಾರ ದೇಶದಲ್ಲಿ ದಾಖಲಾದ 42,948ಕ್ಕೆ ಹೋಲಿಸಿದರೆ ತುಸು ಕಡಿಮೆ. ಸೋಮವಾರದ ಸಂಖ್ಯೆ ಕೂಡಾ ಹಿಂದಿನ ಸೋಮವಾರದ ಸಂಖ್ಯೆಗಿಂತ ಕಡಿಮೆ. ಇದರಿಂದ ಕಳೆದ ವಾರ ದೇಶದಲ್ಲಿ ಕಂಡುಬಂದ ಏರಿಕೆ ಪ್ರವೃತ್ತಿ ಮುಂದುವರಿದಿಲ್ಲ ಎನ್ನುವುದು ತಿಳಿಯುತ್ತದೆ.

ಏಳು ದಿನಗಳ ದೈನಿಕ ಸರಾಸರಿ ರವಿವಾರ 40,832 ಇದ್ದುದು ಮಂಗಳವಾರ 40,665ಕ್ಕೆ ಇಳಿದಿದೆ. ಕೇರಳ ಹೊರತುಪಡಿಸಿದಂತೆ ದೇಶದ ಇತರೆಡೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿಲ್ಲವಾದ್ದರಿಂದ ಒಟ್ಟು ಪ್ರಕರಣಗಳಲ್ಲಿ ಕೇರಳದ ಪಾಲು ಶೇಕಡ 56ಕ್ಕೆ ಏರಿದೆ. ಕೇರಳದಲ್ಲಿ ಪ್ರಕರಣಗಳ ಧನಾತ್ಮಕತೆ ದರ ಮಂಗಳವಾರ 11.8ರಷ್ಟಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)