varthabharthi


ಕ್ರೀಡೆ

ಒಲಿಂಪಿಕ್ಸ್‌: ಭಾರತದ ಕುಸ್ತಿಪಟು ರವಿ ಕುಮಾರ್ ಫೈನಲ್ ಗೆ, ಕನಿಷ್ಠ ಬೆಳ್ಳಿ ಪದಕ ಖಚಿತ

ವಾರ್ತಾ ಭಾರತಿ : 4 Aug, 2021

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತೀಯ ಕುಸ್ತಿಪಟು ರವಿ ಕುಮಾರ್ ದಹಿಯಾ ಫೈನಲ್‌ಗೆ ಪ್ರವೇಶಿಸಿದ್ದು ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ.

ಬುಧವಾರ ನಡೆದ ಪುರುಷರ ಫ್ರೀಸ್ಟೈಲ್ ನ 57 ಕೆಜಿ  ವಿಭಾಗದ ಸೆಮಿ ಫೈನಲ್ ನಲ್ಲಿ 23 ವರ್ಷದ ರವಿ ದಹಿಯಾ ಕಝಕ್ ಸ್ತಾನದ ನುರಿಸ್ಲಾಮ್ ಸನಾಯೆವ್  ವಿರುದ್ಧ ಜಯ ಸಾಧಿಸಿದ್ದಾರೆ.

ದಹಿಯಾ ಅವರು ಕೆಡಿ ಜಾಧವ್, ಸುಶೀಲ್ ಕುಮಾರ್, ಯೋಗೇಶ್ವರ ದತ್ತ  ಹಾಗೂ ಸಾಕ್ಷಿ ಮಲಿಕ್ ಬಳಿಕ ಒಲಿಂಪಿಕ್ಸ್ ಪದಕ ಗೆದ್ದಿರುವ ಭಾರತದ 5ನೇ ಕುಸ್ತಿಪಟು ಆಗಿದ್ದಾರೆ.

ರವಿ ಕುಮಾರ್ ಗುರುವಾರ ಸಂಜೆ 4:20ಕ್ಕೆ(ಭಾರತೀಯ ಕಾಲಮಾನ) ನಡೆಯಲಿರುವ ಫೈನಲ್ ಸುತ್ತಿನಲ್ಲಿ ರಶ್ಯದ  ಝಾವೂರ್ ಉಗುವ್ ಅವರನ್ನು ಎದುರಿಸಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)