ರಾಷ್ಟ್ರೀಯ
ಸಾಕ್ಷ್ಯಗಳನ್ನು ಮುಂದಿಟ್ಟು ಪೋಸ್ಟ್ ಮಾಡಿದ ಕಾಂಗ್ರೆಸ್ ಮುಖಂಡ
ವೀಡಿಯೋ ಕಾಲ್ ಗಳನ್ನು ಮಾಡಿದ್ದು ಸಾಕು, ಮೊದಲು ಕ್ರೀಡಾಳುಗಳಿಗೆ ಘೋಷಿಸಿದ್ದ ಹಣವನ್ನು ನೀಡಿ: ರಾಹುಲ್ ಗಾಂಧಿ

ಹೊಸದಿಲ್ಲಿ,ಆ.9: ಟೋಕಿಯೊ ಒಲಿಂಪಿಕ್ಸ್ ನ ಪದಕ ವಿಜೇತರು ಸೇರಿದಂತೆ 2018ರ ಏಶ್ಯನ್ ಗೇಮ್ಸ್ ನಂತಹ ಸ್ಪರ್ಧಾ ಕೂಟಗಳಲ್ಲಿ ಪದಕಗಳನ್ನು ಗೆದ್ದಿದುದಕ್ಕಾಗಿ ಭಾರತದ ಕೆಲವು ಅಥ್ಲೀಟ್ ಗಳ ಸರಕಾರಗಳು ಘೋಷಿಸಿದ್ದ ನಗದು ಬಹುಮಾನ ಇನ್ನೂ ಲಭ್ಯವಾಗಿ ಲ್ಲವೆಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗಳಿಸಿದ ಅಥ್ಲೀಟ್ ಗಳನ್ನು ವಿಡಿಯೋ ಕರೆಗಳ ಮೂಲಕ ಅಭಿನಂದಿಸಲು ಮುಂದಾದ ರಾಜಕಾರಣಿಗಳ ನಡೆಯನ್ನೂ ರಾಹುಲ್ ಟೀಕಿಸಿದ್ದಾರೆ. ಪದಕ ವಿಜೇತರೊಂದಿಗೆ ವಿಡಿಯೋ ಕರೆಗಳನ್ನು ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಹೆಸರೆತ್ತದೆ ಟೀಕಿಸಿದ ರಾಹುಲ್, ಕ್ರೀಡಾಳುಗಳಿಗೆ ಅಭಿನಂದನೆ ಸಲ್ಲಿಸುವ ಬದಲು ಅವರಿಗೆ ಸಲ್ಲಬೇಕಾಗಿ ರುವುದನ್ನು ಪಾವತಿಸುವುದು ಮುಖ್ಯವೆಂದು ಹೇಳಿದರು.
‘‘ಕ್ರೀಡಾಪಟುಗಳು ಅಭಿನಂದನೆಗಳೊಂದಿಗೆ ಅವರಿಗೆ ಸಲ್ಲಬೇಕಾಗಿರುವುದನ್ನು ಕೂಡಾ ನೀಡಬೇಕಾಗಿದೆಯೇ ಹೊರತು ಕ್ರೀಡಾ ಬಜೆಟ್ ಕಡಿತವನ್ನಲ್ಲ’’ ಎಂದು ಅವರು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ‘‘ ವಿಡಿಯೋ ಕರೆಗಳನ್ನು ಮಾಡುವುದು ಇನ್ನು ಸಾಕು... ಈಗ ಪ್ರಶಸ್ತಿಗಳ ಮೊತ್ತವನ್ನು ಹಸ್ತಾಂತರಿಸಬೇಕಾಗಿದೆ ’’ ಎಂದು ಅವರು ಅವರು ಹೇಳಿದ್ದಾರೆ.
‘ನಾಲ್ಕು ವರ್ಷಗಳಾದರೂ ಒಲಿಂಪಿಯನ್ನರು ನಗದು ಪುರಸ್ಕಾರಕ್ಕಾಗಿ ಕಾಯುತ್ತಿದ್ದಾರೆ’’ ಎಂಬ ತಲೆಬರದೊಂದಿಗೆ ಟೈಮ್ಸ್ ಆಫ್ ಇಂಡಿಯಾ ಆಂಗ್ಲ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಕೂಡಾ ಅವರು ರಾಹುಲ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಪದಕ ಭರವಸೆಯೊಂದಿಗೆ ಟೋಕಿಯೋ ಒಲಿಂಪಿಕ್ಸ್ ಗೆ ತೆರಳಿದವರಿಗೂ ಈ ಹಿಂದಿನ ಕ್ರೀಡಾ ಕೂಟಗಳಲ್ಲಿ ಭರವಸೆ ನೀಡಲಾಗಿದ್ದ ಲಕ್ಷಾಂತರ ರೂ.ಗಳ ನಗದು ಬಹುಮಾನ ಇನ್ನೂ ಪಾವತಿಯಾಗಿಲ್ಲವೆಂದು ಕ್ರೀಡಾಳುಗಳ ಬಂಧುಗಳ ಹೇಳಿಕೆಯನ್ನು ಟೈಮ್ಸ್ ಆಫಂ ಇಂಡಿಯಾ ವರದಿ ಉಲ್ಲೇಖಿಸಿತ್ತು.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ವಿಜೇತರಾದ ಅತ್ಲೀಟ್ ನೀರಜ್ ಚೋಪ್ರಾ ಹಾಗೂ ಕಂಚು ಗೆದ್ದ ಕುಸ್ತಿಪಟು ಬಜರಂಗ ಪೂನಿಯಾ ಅವರು 2019ರಲ್ಲಿ ಮಾಡಿದ್ದ ಟ್ವೀಟ್ ಗಳ ಸ್ಕ್ರೀನ್ ಶಾಟ್ ಗಳನ್ನು ಕೂಡಾ ಲಗತ್ತಿಸಲಾಗಿದೆ.
2019ರ ಜೂನ್ 26ರಂದು ಬಜರಂಗ್ ಪೂನಿಯಾ ಅವರು ಟ್ವಟ್ಟರ್ ನಲ್ಲಿ ಮಾಡಿದ ಪೋಸ್ಟ್ ನಲ್ಲಿ ‘‘ ನೀವು ಬಹುಮಾನಗಳ ಭರವಸೆ ನೀಡುತ್ತಿರಿ , ಆನಂತರ ಕ್ರೀಡಾಪಟುಗಳನ್ನು ಬೆಂಬಲಿಸುವುದಾಗಿ ಹೇಳುತ್ತೀರಿ. ನೀವು ನಿಮ್ಮ ಭರವಸೆಯನ್ನು ಈಡೇರಿಸಲು ಸಾಧ್ಯವಾಗದೆ ಇದ್ದಲ್ಲಿ, ಭವಿಷ್ಯದಲ್ಲಿ ನೀವು ಯಾವುದೇ ಆಟಗಾರನಿಂದ ಏನನ್ನು ನಿರೀಕ್ಷಿಸಲು ಸಾಧ್ಯ’’ ಎಂದು ಹೇಳಿದ್ದರು.
ಇದರ ಜೊತೆಗೆ 2018ರ ಏಶ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಪದಕ ವಿಜೇತ ಪೂನಿಯಾಗೆ 3 ಲಕ್ಷದ ನಗದು ಬಹು ಮಾನದ ಭರವಸೆ ನೀಡಿ, ಹರ್ಯಾಣ ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ ಹಾಗೂ ಗೃಹ ಸಚಿವ ಅನಿಲ್ ವಿಜ್ ಪೋಸ್ಟ್ ಮಾಡಿದ್ದ ಟ್ವೀಟ್ ಗಳನ್ನು ಕೂಡಾ ರಾಹುಲ್ ಲಗತ್ತಿಸಿದ್ದಾರೆ.
ಕೆಲವೇ ತಾಸುಗಳ ಬಳಿಕ ಈ ಸಂದೇಶಕ್ಕೆ ಮರು ಟ್ವೀಟ್ ಮಾಡಿದ್ದ ನೀರಜ್ ಚೋಪ್ರಾ ಅವರು, ‘‘ ಸರ್.. ನೀವು ಪದಕಗಳನ್ನು ಗೆದ್ದಾಗ ಇಡೀ ದೇಶಕ್ಕೆ ಸಂತಸವಾಗುತ್ತದೆ ಮತ್ತು ನೀವು ಹೆಮ್ಮೆಯಿಂದ ನಾವು ಹರ್ಯಾಣದವರೆಂದು ಹೇಳಿಕೊಳ್ಳುವಿರಿ. ಹರ್ಯಾಣದ ಕ್ರೀಡಾಪಟುಗಳು ಕ್ರೀಡಾಜಗತ್ತಿನಲ್ಲಿ ತಮ್ಮ ಹೆಗ್ಗುರುತನ್ನು ಬಿಟ್ಟುಹೋಗಿದ್ದಾರೆ. ಅದನ್ನು ಸಂರಕ್ಷಿಸಬೇಕಾಗಿದೆ. ಹೀಗಾಗಿ ನೀವು ಭರವಸೆ ನೀಡಿದ್ದ ನಗದು ಬಹುದಿನಗಳ ಭರವಸೆಯನ್ನು ದಯವಿಟ್ಟು ಈಡೇರಿಸಿ, ಹೀಗಾಗಿ ನಾವು ನಮ್ಮ ಗಮನವನ್ನು ಮುಂದಿನ ಒಲಿಂಪಿಕ್ ಗೇಮ್ಸ್ ಮೇಲೆ ಕೇಂದ್ರೀಕರಿಸಬಹುದಾಗಿದೆ ಹಾಗೂ ನಮ್ಮ ದೇಶ ಹಾಗೂ ರಾಜ್ಯದ ಹೆಸರನ್ನು ಬೆಳಗಿಸ ಬಹುದಾಗಿದೆ’’ ಎಂದಿದ್ದರು.
जब खिलाड़ीयो को आप पुरस्कार का वायदे करते है तब ऊन खिलाड़ीयो को आप ने पैसे का लालच नहीं बल्कि खिलाड़ियों का साथ देने का वायदा करते हैं । अगर आप अपने किये वायदे को पूरा नहीं कर सकते तो फिर भविष्य मे कोई भी खिलाड़ी आप से किस बात की उम्मीद रखें!@anilvijminister @mlkhattar pic.twitter.com/CxX7JK9Ez1
— Bajrang Punia (@BajrangPunia) June 26, 2019
@mlkhattar @anilvijminister सर जब हम मेडल जीत कर आते है तो पूरा देश ख़ुश होता है ओर आप भी गर्व से कहते है की हमारे हरियाणा के खिलाड़ी है।हरियाणा के खिलाड़ियों ने खेल जगत में अपनी अलग से छाप छोड़ी है दूसरे राज्य भी हरियाणा की मिसाल देते है कृपा करके इस मिसाल को क़ायम रहने दीजिए। https://t.co/OPlyyGZ19I
— Neeraj Chopra (@Neeraj_chopra1) June 26, 2019
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ










