ಬೆಂಗಳೂರು
ಬೆಂಗಳೂರು: ಪಾರಿವಾಳ ಹಿಡಿಯಲು ಹೋಗಿ ಕಟ್ಟಡದಿಂದ ಬಿದ್ದು ಯುವಕ ಮೃತ್ಯು
ವಾರ್ತಾ ಭಾರತಿ : 10 Aug, 2021

ಬೆಂಗಳೂರು, ಆ.10: ಪಾರಿವಾಳ ಹಿಡಿಯಲು ಹೋದ ಯುವಕನೊಬ್ಬ ನಾಲ್ಕು ಮಹಡಿಯ ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಘಟನೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭೂಪಸಂದ್ರದ ಉಮರ್ ಫಾರೂಕ್(19) ಎಂಬುವರು ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.
ಪಾರಿವಾಳ ಹಿಡಿಯುವುದನ್ನು ಹವ್ಯಾಸ ಮಾಡಿಕೊಂಡಿದ್ದ ಉಮರ್, ಹಲವು ಕಟ್ಟಡಗಳನ್ನು ಏರಿ ಪಾರಿವಾಳ ಹಿಡಿದು ತರುತ್ತಿದ್ದ. ಅದರಂತೆ ಸೋಮವಾರ ಸಂಜೆಯೂ ನಾಲ್ಕು ಅಂತಸ್ತಿನ ಕಟ್ಟಡ ಏರಿ ಮಹಡಿಯಲ್ಲಿ ನಿಂತು ಪಾರಿವಾಳ ಹಿಡಿಯುತ್ತಿದ್ದಾಗ ಆಯತಪ್ಪಿ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)










