ಪಿ.ಎಂ. ಮೂಸಕುಂಞಿ ಅರಿಯಡ್ಕ
ಪುತ್ತೂರು : ತಾಲೂಕಿನ ಒಳಮೊಗ್ರು ಗ್ರಾಮದ ಶೇಕಮಲೆ ನಿವಾಸಿ ಉದ್ಯಮಿ ಪಿ.ಎಂ. ಮೂಸಕುಂಞಿ ಅರಿಯಡ್ಕ (60) ಅವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು, ಸಹೋದರ ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿಯ ಗೌರವಾಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಸೇರಿದಂತೆ 6 ಮಂದಿ ಸಹೋದರರು, 6 ಮಂದಿ ಸಹೋದರಿಯರು, ಪತ್ನಿ, ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯ ಅರಿಯಡ್ಕ ಮಸೀದಿಯಲ್ಲಿ ನಡೆಸಲಾಯಿತು.
Next Story