varthabharthi


ಅಂತಾರಾಷ್ಟ್ರೀಯ

ತಾಲಿಬಾನ್ ವಿರೋಧಿ ಪಡೆ ವಕ್ತಾರ ಫಾಹಿಮ್ ದಸ್ತಿ ಹತ್ಯೆ : ವರದಿ

ವಾರ್ತಾ ಭಾರತಿ : 6 Sep, 2021

ಫಾಹಿಮ್ ದಸ್ತಿ

ಕಾಬೂಲ್: ಅಫ್ಘಾನಿಸ್ತಾನದ ಪ್ರತಿರೋಧ ಪಡೆಯ ವಕ್ತಾರ, ಪಂಜ್ಶೀರ್‌ನಲ್ಲಿ ನಡೆಯುತ್ತಿರುವ ಭೀಕರ ಸಂಘರ್ಷದಲ್ಲಿ ಹತ್ಯೆಗೀಡಾಗಿದ್ದಾರೆ. ಏತನ್ಮಧ್ಯೆ ತಾಲಿಬಾನ್ ಪಡೆಗಳು ಪ್ರಾಂತೀಯ ರಾಜಧಾನಿಯನ್ನು ಪ್ರವೇಶಿಸಿದ್ದಾಗಿ ಹಲವು ಮಾಧ್ಯಮಗಳು ವರದಿ ಮಾಡಿವೆ.

ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ (ಎನ್‌ಆರ್‌ಎಫ್) ವಕ್ತಾರ ಫಾಹಿಮ್ ದಸ್ತಿ ಹತ್ಯೆಯಾಗಿರುವುದು ವರದಿಯಾಗಿದ್ದು, ಎನ್‌ಆರ್‌ಎಫ್‌ನ ವಿವಿಧ ಟ್ವಿಟ್ಟರ್ ಹ್ಯಾಂಡಲ್‌ಗಳಲ್ಲೂ ಇದನ್ನು ದೃಢಪಡಿಸಲಾಗಿದೆ.

ರವಿವಾರ ಮುಂಜಾನೆಯಷ್ಟೇ ದಸ್ತಿ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಿಂದ, "ತಾಲಿಬಾನ್ ಯೋಧರನ್ನು ಅಕ್ಷರಶಃ ಈ ಪ್ರದೇಶದಿಂದ ಓಡಿಸಲಾಗಿದೆ" ಎಂದು ಟ್ವೀಟ್ ಮಾಡಿದ್ದರು. ನಿಯತವಾಗಿ ಈ ಭಾಗದ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದ ದಸ್ತಿ, ವಿರೋಧಿ ಪಡೆಗಳಿಂದ ತಾಲಿಬಾನ್ ತೀವ್ರ ಒತ್ತಡ ಎದುರಿಸುತ್ತಿದೆ ಎಂದು ಹೇಳಿದ್ದರು. ಜಮಾತ್ ಇ ಇಸ್ಲಾಮಿ ಪಕ್ಷದ ಹಿರಿಯ ಸದಸ್ಯರಾಗಿದ್ದ ದಸ್ತಿ, ಫೆಡರೇಷನ್ ಆಫ್ ಅಫ್ಘನ್ ಜರ್ನಲಿಸ್ಟ್ ಸಂಘಟನೆಯ ಸದಸ್ಯರೂ ಆಗಿದ್ದರು ಎಂದು ಖಮ್ಮಾ ಪ್ರೆಸ್ ವರದಿ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)