varthabharthi


ಕರಾವಳಿ

ಅರಸಿನಮಕ್ಕಿ: ಗುಂಡೇಟಿಗೆ ಸಾಕು ಎಮ್ಮೆ ಬಲಿ

ವಾರ್ತಾ ಭಾರತಿ : 7 Sep, 2021

ಧರ್ಮಸ್ಥಳ : ಮೇಯಲು ಬಿಟ್ಟಿದ್ದ ಎಮ್ಮೆಯನ್ನು ಕಿಡಿಗೇಡಿಗಳು ಗುಂಡು ಹಾರಿಸಿ ಕೊಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ಫಲಸ್ತಡ್ಕ ಎಂಬಲ್ಲಿ ನಡೆದಿದೆ.

ಹೊಸ್ತೋಟ ವಾಳ್ಯದ ಅರೆಕ್ಕಲ್ ಮಹಾದೇವ ಭಟ್ ಎಂಬವರ ಹಾಲು ಕರೆಯುವ ಸುಮಾರು 10 ವರ್ಷ ಪ್ರಾಯದ ಎಮ್ಮೆಯನ್ನು ಮನೆ ಪರಿಸರದಲ್ಲಿ ಮೇಯಲು ಬಿಟ್ಟಿದ್ದರು. ಎಮ್ಮೆ ತಡರಾತ್ರಿವರೆಗೂ ಮನೆಗೆ ಬಾರದ ಕಾರಣ ಹುಡುಕಾಟ ನಡೆಸಿದಾಗ ಸಮೀಪದ ಫಲಸ್ತಡ್ಕ ಎಂಬಲ್ಲಿ ಮಂಗಳವಾರ ಶವ ಪತ್ತೆಯಾಗಿದೆ. ಎಮ್ಮೆಯ ಮೈಮೇಲೆ ಗುಂಡಿನ ಗಾಯಗಳು ಕಂಡುಬಂದಿದ್ದು ಬೇಟೆಗಾರರ ಗುಂಡೇಟಿಗೆ  ಬಲಿಯಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಜತೆ  ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪಶು ವೈದ್ಯಕೀಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)