varthabharthi


ಕರಾವಳಿ

ಭೌತಿಕ ತರಗತಿ ಹಾಜರಾತಿಯಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ

ವಾರ್ತಾ ಭಾರತಿ : 7 Sep, 2021

ಉಡುಪಿ, ಸೆ.7: ಉಡುಪಿ ಜಿಲ್ಲೆಯು ಆರರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಭೌತಿಕ ತರಗತಿಯ ಹಾಜರಾತಿಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ.

ಸೆ.6ರಂದು ಮೊದಲ ದಿನ ರಾಜ್ಯದಲ್ಲಿ 6ನೇ ತರಗತಿ: ಶೇ.29.15, 7ನೇ ತರಗತಿ: ಶೇ.28.05, 8ನೇ ತರಗತಿ: ಶೇ 23.22 ಸರಾಸರಿ ತರಗತಿವಾರು ಹಾಜರಾತಿ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲಿ 6ನೇ ತರಗತಿ: ಶೇ.59, 7ನೇ ತರಗತಿ: ಶೇ.59, 8ನೇ ತರಗತಿ: ಶೇ.67 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಸೆ.7ರಂದು ಉಡುಪಿ ಜಿಲ್ಲೆಯ 6ನೇ ತರಗತಿ: ಶೇ.79, 7ನೇ ತರಗತಿ: ಶೇ 77, 8ನೇ ತರಗತಿ: ಶೇ.75 ಹಾಜರಾತಿ ದಾಖಲಾಗಿದೆ. ಈ ಮೂಲಕ ಹಾಜರಾತಿಯಲ್ಲಿ ರಾಜ್ಯಕ್ಕೆ ಉಡುಪಿ ಜಿಲ್ಲೆಯು ಪ್ರಥಮ, ಚಿಕ್ಕೋಡಿ(ಶೇ.55) ದ್ವಿತೀಯ, ಮಧುಗಿರಿ(ಶೇ.54) ಮೂರನೇ ಸ್ಥಾನ ಪಡೆದಿವೆ ಎಂದು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದೇಶರ್ಕ ಎನ್.ಎಚ್.ನಾಗೂರ ತಿಳಿಸಿದ್ದಾರೆ.

ಸೆ.7ರಂದು ಉಡುಪಿ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ 6ನೇ ತರಗತಿ: ಶೇ 79, 7ನೇ: ಶೇ.77, 8ನೇ: ಶೇ.75, 9ನೇ: ಶೇ.74, 10ನೇ: ಶೇ.75, ಅನುದಾನಿತ ಶಾಲೆಗಳಲ್ಲಿ 6ನೇ ತರಗತಿ: ಶೇ.72, 7: ಶೇ.73, 8ನೇ: ಶೇ.72, 9: ಶೇ.76, 10: ಶೇ.79, ಅನುದಾನರಹಿತ ಶಾಲೆಗಳಲ್ಲಿ 6ನೇ ತರಗತಿ: ಶೇ.56, 7: ಶೇ.55, 8: ಶೇ.60, 9: ಶೇ.74, 10: ಶೇ.78 ತರಗತಿವಾರು ಹಾಜರಾತಿ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)