varthabharthi


ರಾಷ್ಟ್ರೀಯ

ಕೋವಿಡ್ ನಿಯಮ ಉಲ್ಲಂಘನೆ: ದಿಲ್ಲಿಯಲ್ಲಿ 4 ತಿಂಗಳಲ್ಲಿ ವಿಧಿಸಿದ ದಂಡದ ಮೊತ್ತ ಎಷ್ಟು ಕೋ.ರೂ. ಗೊತ್ತೇ?

ವಾರ್ತಾ ಭಾರತಿ : 9 Sep, 2021

ಸಾಂದರ್ಭಿಕ ಚಿತ್ರ (PTI photo)

ಹೊಸದಿಲ್ಲಿ, ಸೆ.9: ದಿಲ್ಲಿಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎಂಟು ಲಕ್ಷ ಪ್ರಕರಣಗಳು ದಾಖಲಾಗಿದ್ದು, 135 ಕೋಟಿ ರೂಪಾಯಿ ದಂಡ ಸಂಗ್ರಹಿಸಲಾಗಿದೆ.

ದಿಲ್ಲಿ ಸರ್ಕಾರಿ ತಂಡಗಳು ಮತ್ತು ಪೊಲೀಸ್ ಸಿಬ್ಬಂದಿ ಈ ದಂಡ ವಿಧಿಸಿದ್ದಾರೆ ಎಂದು ಬುಧವಾರ ಪ್ರಕಟಿಸಲಾಗಿದೆ. ಸ್ಥಳೀಯ ನಗರ ಸರ್ಕಾರದ ಕಂದಾಯ ಇಲಾಖೆ ಮತ್ತು ಕಾನೂನು ಜಾರಿ ತಂಡಗಳು ಕ್ರಮವಾಗಿ ಆರು ಲಕ್ಷ ಹಾಗೂ ಎರಡು ಲಕ್ಷ ಮಂದಿಯ ವಿರುದ್ಧ ಮೇ- ಆಗಸ್ಟ್ ಅವಧಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಮಾಸ್ಕ್ ಧರಿಸದೇ ಇದ್ದುದು, ಗುಂಪು ಸೇರಿರುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದ ಪ್ರಕರಣಗಳು ಇದರಲ್ಲಿ ಸೇರಿವೆ.

ಸರಕಾರಿ ತಂಡಗಳು 103 ಕೋಟಿ ರೂಪಾಯಿ ದಂಡ ವಿಧಿಸಿದ್ದರೆ, ಪೊಲೀಸ್ ಇಲಾಖೆ 32 ಕೋಟಿ ರೂಪಾಯಿ ದಂಡ ವಿಧಿಸಿದೆ. ನಿಯಮಾವಳಿಯನ್ನು ಉಲ್ಲಂಘಿಸಿದ 15,600 ಮಂದಿಯನ್ನು ಕಳೆದ ನಾಲ್ಕು ತಿಂಗಳಲ್ಲಿ ಪೊಲೀಸರು ಬಂದಿಸಿದ್ದಾರೆ. ಆಗಸ್ಟ್‌ನಲ್ಲಿ 1.8 ಲಕ್ಷ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ 32.41 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕೋವಿಡ್ ಸೂಕ್ತ ನಡವಳಿಕೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ದಿಲ್ಲಿ ವಿಕೋಪ ನಿರ್ವಹಣೆ ಪ್ರಾಧಿಕಾರವು ಜಿಲ್ಲಾ ಮ್ಯಾಜಿಸ್ಟ್ರೇಟರ್, ಡಿಸಿಪಿ, ಸ್ಥಳೀಯ ಸಂಸ್ಥೆಗಳ ಉಪ ಆಯುಕ್ತರು ಮತ್ತು ಇತರ ಅಧಿಕಾರಿಗಳಿಗೆ ಅಧಿಕಾರ ನೀಡಿತ್ತು. ಕಂದಾಯ ಇಲಾಖೆಯ ಹಾಗೂ ದಿಲ್ಲಿ ಪೊಲೀಸರ 150ಕ್ಕೂ ಹೆಚ್ಚು ತಂಡಗಳು ಆಗಸ್ಟ್‌ನಲ್ಲಿ ನಿಯಮ ಉಲ್ಲಂಘಿಸಿದ 1.8 ಲಕ್ಷ ಮಂದಿಯನ್ನು ಪತ್ತೆ ಮಾಡಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)